ವೈದ್ಯ ಹಾಗೂ ಲೇಖಕ ವಿನೋದ ಛಬ್ಬಿ ಅವರ ಕೃತಿ-ಲೈಂಗಿಕ ಚಿಕಿತ್ಸೆ ನೈಜ ಪ್ರಕರಣಗಳು. ಆರೋಗ್ಯಕರ ಲೈಂಗಿಕ ಜೀವನ ಸುಖ ಸಂಸಾರಕ್ಕೆ ಬುನಾದಿ. ಸಮಾಜದ ಸ್ವಾಸ್ಥ್ಯಕ್ಕೂ ನೆರವಾಗುತ್ತದೆ. ಒಂದು ವೇಳೆ ಸಮರಸದಲ್ಲಿ ವಿರಸ ತಲೆದೋರಿದರೆ ತಜ್ಞರ ಸಲಹೆ, ಚಿಕಿತ್ಸೆ ಅಗತ್ಯ. ಸಲಹೆ, ಚಿಕಿತ್ಸೆ ಪಡೆದು ಆರೋಗ್ಯಕರ ಲೈಂಗಿಕ ಜೀವನಕ್ಕೆ ಮತ್ತೆ ಅಡಿಯಿರಿಸಿದ ಹಲವು ನೈಜ ಪ್ರಕರಣಗಳನ್ನು ವಿವರಿಸುವ ಕೃತಿ ಇದು. ಚಿಕಿತ್ಸಾ ವಿಧಾನಗಳನ್ನು ಗಂಡ ಹೆಂಡತಿಗೆ ಎಂಥ ಭಾಷೆಯಲ್ಲಿ ವಿವರಿಸಬೇಕು ಎಂಬುದನ್ನು ವೈದ್ಯರು ಮತ್ತು ಆಪ್ತ ಸಮಾಲೋಚಕರು ಅರ್ಥಮಾಡಿಕೊಳ್ಳಲೂ ಈ ಪುಸ್ತಕ ನೆರವಾಗುತ್ತದೆ.
©2025 Book Brahma Private Limited.