ಡಾ. ಪದ್ಮಿನಿ ಪ್ರಸಾದ್ ಅವರು ಬರೆದ ಕೃತಿ-ಲೈಂಗಿಕ ವೈವಿಧ್ಯ. ಲೈಂಗಿಕ ಹಸಿವು ಎಂಬುದು ದೇಹದ ಪ್ರಮುಖ ಹಸಿವುಗಳಲ್ಲೊಂದು. ಅದನ್ನು ಆರೋಗ್ಯಕರ ರೀತಿಯಲ್ಲಿ ತಣಿಸಿಕೊಳ್ಳಬೇಕು. ತಪ್ಪಿದರೆ, ರೋಗಗಳ ಗೂಡಾಗಿ ಪರಿತಪಿಸಬೇಕಾಗುತ್ತದೆ. ಲೆಂಗಿಕತೆ ಎಂಬುದು ಒಂದು ಕಲೆ. ಅದನ್ನು ವೈವಿಧ್ಯಮಯವಾಗಿಯೂ ಸಂಭ್ರಮಿಸಬಹುದು. ಈ ಬಗ್ಗೆ ವಿವರಗಳಿರುವ ಕೃತಿ ಇದು. ವೈಜ್ಞಾನಿಕವಾಗಿ ವಿವರಿಸಿದ ಈ ಕೃತಿಗೆ ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ (2008) ಲಭಿಸಿದೆ.
ಪುಸ್ತಕ ಪರಿಚಯ- ಕೃಪೆ- ಹೊಸತು- ಮಾರ್ಚ್ - 2009
ಲೈಂಗಿಕತೆಯ ಬಗ್ಗೆ ಇರುವ ತಪ್ಪು ತಿಳುವಳಿಕೆ ಮೂಢನಂಬಿಕೆ ಗಳನ್ನು ದೂರಮಾಡಿ ಜನಸಾಮಾನ್ಯರಲ್ಲಿ ಆರೋಗ್ಯಕರ ಲೈಂಗಿಕಪ್ರಜ್ಞೆ ಮೂಡಿಸುವುದೇ ಈ ಕೃತಿಯ ಉದ್ದೇಶ. ಮುಕ್ತವಾಗಿ ಮಾತನಾಡಲೂ ಪರಸ್ಪರ ಚರ್ಚಿಸಲೂ ಅಂಜಿಕೆ ಮುಜುಗರ. ಲೈಂಗಿಕ ಶಿಕ್ಷಣವಂತೂ ನಮ್ಮ ದೇಶದಲ್ಲೇ ಇಲ್ಲ. ಅಸಹಜ ಅಶ್ಲೀಲ ಸಾಹಿತ್ಯ, ಮಕ್ಕಳ ಮೇಲೆ ಅತ್ಯಾಚಾರ, ಅತಿಕಾಮುಕತೆ, ಸರಿಯಾದ ಮಾರ್ಗದರ್ಶನ ವಿಲ್ಲದ ಅರೆ ಬರೆ ತಿಳುವಳಿಕೆ ಇವುಗಳಿಂದಾಗಿ ಲೈಂಗಿಕ ಅಪರಾಧಗಳು ಹೆಚ್ಚುತ್ತಿದ್ದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ. ಒಂದಕ್ಕೊಂದು ಸಂಬಂಧವಿರುವ ಇಲ್ಲಿನ ವಿಚಾರಗಳ ಮೇಲೆ ಲೈಂಗಿಕತಜ್ಞೆ ಹಾಗೂ ವೈವಾಹಿಕ ಸಲಹಾತಜ್ಞೆ ಡಾ|| ಪದ್ಮನಿ ಪ್ರಸಾದ್ ಬೆಳಕು ಚೆಲ್ಲಿ ಸಲಹೆ ನೀಡಿದ್ದಾರೆ
©2024 Book Brahma Private Limited.