ಏಡ್ಸ್ ರೋಗ ಎಂದರೇನು? ಅದರ ಜೊತೆ ಬದುಕುವುದು ಹೇಗೆ?

Author : ಸಿ.ಆರ್. ಚಂದ್ರಶೇಖರ್

Pages 72

₹ 80.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: : # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 08022161900,

Synopsys

ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರು ಕನ್ನಡಕ್ಕೆ ರೂಪಾಂತರಿಸಿದ ಕೃತಿ-ಏಡ್ಸ್ ರೋಗ ಎಂದರೇನು? ಅದರ ಜೊತೆ ಬದುಕುವುದು ಹೇಗೆ?. ಏಡ್ಸ್ -ಲೈಂಗಿಕ ರೋಗಗಳಿಗೆ ಬಲಿಯಾಗುವ ಸ್ಥಿತಿ. ಅನಾರೋಗ್ಯಕರ ಲೈಂಗಿಕ ಚಟುವಟಿಕೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆಗೊಳಿಸಿಕೊಂಡವರ ರೋಗವಿದು. ದೈಹಿಕ ಶಕ್ತಿ ಕಡಿಮೆಯಾಗುತ್ತಾ ಬಂದು, ಯಾವುದೇ ಔಷಧಿಗಳು ಪರಿಣಾಮ ಬೀರದ ಸ್ಥಿತಿಯಲ್ಲಿ ವ್ಯಕ್ತಿ ಸಾಯುತ್ತಾನೆ. ಈ ರೋಗವು ಸಾಂಕ್ರಾಮಿಕವಲ್ಲ. ಈ ಬಗ್ಗೆ ತಪ್ಪು ತಿಳಿವಳಿಕೆ ಜನರಲ್ಲಿ ಇದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ವಿಚಾರವೂ ಮತ್ತು ಏಡ್ಸ್ ರೋಗಿಗಳು ರೋಗ ನಿವಾರಣೆಗಾಗಿ ತಮ್ಮನ್ನು ತಾವೇ ಹೇಗೆ ಸಿದ್ಧತೆಯಲ್ಲಿರಬೇಕು ಎಂಬಿತ್ಯಾದಿ ಸಲಹೆಗಳು ಈ ಕೃತಿಯಲ್ಲಿವೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books