‘ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು’ ಕೃತಿಯು ಡಿ.,ಎನ್. ಶಂಕರ ಬಟ್, ಯೋ. ಬರತ್ ಕುಮಾರ್ ಸಂದೀಪ್ ಕಂಬಿ, ಮಲ್ಲೇಶ್ ಬೆಳವಾಡಿ, ವಿವೇಕ್ ಶಂಕರ್ ಅವರ ಸಂಪಾದಿತ ಕೃತಿಯಾಗಿದೆ. ಎರಡನೇ ಮುದ್ರಿತ ಕೃತಿಯಾಗಿದ್ದು ಈ ಕೃತಿಯ ಮೊದಲನೇ ಮುದ್ರಣವು 2017ರಲ್ಲಿ ಬಿಡುಗಡೆಗೊಂಡಿತು. ಕನ್ನಡ ಬರಹಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡದವು ಯಾವುವು ಮತ್ತು ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳು ಯಾವುವು ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವಾಗಲು ಈ ಕೃತಿ ಸಹಕಾರಿಯಾಗಿದೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲುಪುವಂತೆ ಮಾಡಲು ಹಾಗೂ ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಬೇಕು ಎಂಬ ತುಡಿತ ಇರುವವರಿಗೆ ಕನ್ನಡ ಪದಗಳನ್ನೇ ಬಳಸಲು ಈ ಕೃತಿ ನೆರವಾಗಬಲ್ಲದು.ಕನ್ನಡ ಬರಹಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡದವು ಯಾವುವು ಮತ್ತು ಸಂಸ್ಕೃತದಿಂದ ಎರಡವಲಾಗಿ ಪಡೆದ ಪದಗಳು ಯಾವುವು ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವಾಗಲು ಈ ಪದನೆರಕೆಯನ್ನು ಉಂಟುಮಾಡಲಾಗಿದೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲುಪುವಂತೆ ಮಾಡಲು ಅವುಗಲ್ಲಿ ಅದಷ್ಟು ಕಡಿಮೆ ಸಂಸ್ಕೃತ ಎರವಲುಗಳಿಗೆ ಸಾಟಿಯಾಗಿ ಎಂತಹ ಕನ್ನಡ ಪದಗಳನ್ನು ಬಳಸಲು ಬರುತ್ತದೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಈ ಪದನೆರಕೆಯ್ನನು ಉಂಟುಮಾಡಲಾಗಿದೆ ಎಂದಿದ್ದಾರೆ.
©2024 Book Brahma Private Limited.