ಭಾಷೆಯ ಬೆಳಕು

Author : ಕೆ.ಎಲ್. ಗೋಪಾಲಕೃಷ್ಣಯ್ಯ

Pages 160

₹ 70.00




Year of Publication: 2002
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

'ಭಾಷೆಯ ಬೆಳಕು’ ಕೆ. ಎಲ್‌. ಗೋಪಾಲಕೃಷ್ಣಯ್ಯ ಅವರ ಭಾಷೆಯ ಬಗೆಗಿನ ಶಾಸ್ತ್ರೀಯ ವಿಚಾರಗಳನ್ನೊಳಗಡಂತೆ ಭಾಷಾ ವಿಜ್ಞಾನದ ಉನ್ನತ ವ್ಯಾಸಂಗಕ್ಕೆ ಈ ಕೃತಿಯು ಸಹಾಕಾರಿಯಾಗುತ್ತದೆ. ಇಲ್ಲಿ ಭಾಷೆಯ ಬಗೆಗಿನ ಶಾಸ್ತ್ರೀಯ ವಿಚಾರಗಳನ್ನೊಳಗೊಂಡಂತೆ ತುಂಬ ಗಹನವಾದ ಭಾಷಾ ವಿಜ್ಞಾನದ ಉನ್ನತ ವ್ಯಾಸಂಗಕ್ಕೆ ಮೊದಲ ಮೆಟ್ಟಿಲಾಗಿ ಈ ಪುಸ್ತಕವನ್ನು ರಚಿಸಲಾಗಿದೆ.

About the Author

ಕೆ.ಎಲ್. ಗೋಪಾಲಕೃಷ್ಣಯ್ಯ

ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಅವರು ಮೂಲತಃ (ಜನನ: 18-07-1938) ಕಳಸಪುರದವರು. ಎಂ.ಎ. ಹಾಗೂ ಪಿಎಚ್ ಡಿ ಪದವೀಧರರು. ಕಾಲೇಜು ಅಧ್ಯಾಪಕರಾಗಿ ನಿವೃತ್ತರು. ಚಿಂತಕರು. ಹೊಸತು ಮಾಸಪತ್ರಿಕೆಯ ಸಹ ಸಂಪಾದಕರು. ಕೃತಿಗಳು: ತಿರುವುಗಳು (ಕಾದಂಬರಿ), ಸಮಾಜವಾದ ಪರಿಚಯ; ಶತಮಾನದ ಅಂಚಿನಲ್ಲಿ ಶಿಕ್ಷಣ; ಧರ್ಮ ನಿರಪೇಕ್ಷತೆ ಮತ್ತು ಅಲ್ಪಸಂಖ್ಯಾತರು, ಭಾರತೀಯ ಇತಿಹಾಸದ ವೈಲಕ್ಷಣಗಳು (ಅನುವಾದಿತ ಕೃತಿಗಳು), ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ(ಪಿಎಚ್ ಡಿ ಮಹಾಪ್ರಬಂಧ)  ಸಾಹಿತ್ಯ ಸಂವಾದ, ಇತಿಹಾಸದ ರಾಜಕೀಯ (ವಿಮರ್ಶೆ/ಸಂಶೋಧನೆ),  ಪುರಾಣ (ವಿಮರ್ಶೆ)  ಭೌತವಾದೀಯ ಚಿಂತನೆಗಳು, ಯಶವಂತ ಚಿತ್ತಾಲ (ಜೀವನ ಚಿತ್ರಣ), ವಿಮರ್ಶೆಯ ದಾರಿ-1, ಪ್ರೌಢಶಾಲಾ ಕನ್ನಡ ಕೈಪಿಡಿ,ಭಾಷೆಯ ಬೆಳಕು, ...

READ MORE

Reviews

ಹೊಸತು-  ಸೆಪ್ಟೆಂಬರ್‌ -2003

ಭಾಷೆಯ ಬಗೆಗಿನ ಶಾಸ್ತ್ರೀಯ ವಿಚಾರಗಳನ್ನೊಳಗೊಂಡಂತೆ ತುಂಬ ಗಹನವಾದ ಭಾಷಾ ವಿಜ್ಞಾನದ ಉನ್ನತ ವ್ಯಾಸಂಗಕ್ಕೆ ಮೊದಲ ಮೆಟ್ಟಿಲಾಗಿ ಈ ಪುಸ್ತಕವನ್ನು ರಚಿಸಲಾಗಿದೆ. ಪ್ರಪಂಚದಾದ್ಯಂತ ಅಸಂಖ್ಯಾತ ಭಾಷೆಗಳು ಅಸ್ತಿತ್ವದಲ್ಲಿದ್ದರೂ ಒಂದೇ ಭಾಷೆ ಇಬ್ಬರಿಗೆ ಬರದಿದ್ದರೆ ಸಂಭಾಷಣೆ ಅಸಾಧ್ಯ. ಭಾಷೆಯ ಉಗಮ, ಬೆಳವಣಿಗೆ ಮತ್ತು ಕಾಲ ಸರಿದಂತೆ ವ್ಯತ್ಯಾಸವಾಗುವ ಉಚ್ಚಾರಣೆಯ ಸ್ವರೂಪಗಳನ್ನು ಪ್ರಸ್ತಾಪಿಸುತ್ತ ಹೋದಂತೆ ಕುತೂಹಲದ ಅಂಶಗಳು ಬೆಳಕಿಗೆ ಬರುತ್ತವೆ. ಪ್ರಪಂಚದಾದ್ಯಂತ ವೈವಿಧ್ಯತೆಯ ಮೂಲ ಒಂದೇ ಇರಬಹುದೇ ?

Related Books