‘ಕನ್ನಡ ಇಂಗ್ಲೀಷ್ ಸಂಕ್ಷಿಪ್ತ ವ್ಯಾಕರಣ’ ಡಾ.ಆರ್.ವಿ.ಭಂಡಾರಿ ರಚಿಸಿರುವ ವ್ಯಾಕರಣ ಗ್ರಂಥ 2001ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ 2011ರವೆರೆಗೆ ನಾಲ್ಕು ಮುದ್ರಣಗಳನ್ನು ಕಂಡಿದೆ. ಈ ಕೃತಿಗೆ ಪ್ರೊ.ಎಸ್.ಆರ್. ನಾರಾಯಣರಾವ್ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಡಾ.ಆರ್.ವಿ. ಭಂಡಾರಿಯವರು ನಮ್ಮ ಜಿಲ್ಲೆಯ ಆಧುನಿಕ ಚಿಂತಕರೂ ಸಾಹಿತಿ ಹಾಗೂ ಶಿಕ್ಷಕರೂ ಆಗಿದ್ದಾರೆ. ಶಾಲಾ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಖಾಸಗಿಯಾಗಿ ಅಭ್ಯಾಸ ಮಾಡುವವರಿಗೂ ಉಪಯುಕ್ತವಾಗಲೆಂದು ಸಾದರ ಪಡಿಸಿರುವ ಈ ಇಂಗ್ಲಿಷ್ ವ್ಯಾಕರಣ ಬೋಧನಾ ಕೈಪಿಡಿ ಅವರಿಗಿರುವ ಶೈಕ್ಷಣಿಕ ಕಾಳಜಿಯ ಹೆಗ್ಗುರುತಾಗಿದೆ. ತಮಗೆ ಸಿಕ್ಕ ತರಬೇತಿ ಹಾಗೂ ತಮ್ಮ ವೈಯಕ್ತಿಕಕ ಅನುಭವವನ್ನು ಸಮರ್ಪಕವಾಗಿ, ಸಮರ್ಥವಾಗಿ ಉಪಯೋಗಿಸಿಕೊಂಡು ಈ ಕೈಪಿಡಿ ಸಿದ್ಧಪಡಿಸಿದ್ದಾರೆ ಎಂದಿದ್ದಾರೆ ಪ್ರೊ.ಎಸ್.ಆರ್. ನಾರಾಯಣರಾವ್. ಇಂಗ್ಲಿಷ್ ವ್ಯಾಕರಣದ ಮುಖ್ಯವಾದ ಎಲ್ಲಾ ಅಂಶಗಳನ್ನು ಸಂಕ್ಷಿಪ್ತವಾಗಿ ಮನದಟ್ಟಾಗುವ ರೀತಿಯಲ್ಲಿ ಬರೆದಿದ್ದಾರೆ. ಈ ಕೈಪಿಡಿಯ ಮುಖ್ಯ ಉದ್ದೇಶ ಕನ್ನಡದ ಮೂಲಕ ಇಂಗ್ಲಿಷ್ ವ್ಯಾಕರಣವನ್ನು ಗ್ರಹಿಸಿ, ಅರ್ಥಮಾಡಿಕೊಂಡು ಬೋಧಿಸಲೂ ತಿಳಿವಳಿಕೆ ಹೊಂದಲೂ ಅನುಕೂಲವಾಗಬೇಕು ಎನ್ನುವುದಾಗಿದೆ.
©2024 Book Brahma Private Limited.