ಡಾ.ನಾಗೇಂದ್ರ ಮಸೂತಿ ಅವರು ಭಾಷಾ ವಿಜ್ಞಾನದಲ್ಲಿ ಆಸಕ್ತರಾಗಿದ್ದಾರೆ. ಇದರಲ್ಲಿ ಒಟ್ಟು 15 ಲೇಖನಗಳ ಸಂಗ್ರಹವಿದೆ. ಕನ್ನಡ ಶಾಸನ ಮತ್ತು ಸಾಹಿತ್ಯದ ಭಾಷೆಯ ಸ್ವರೂಪ, ಕಲಬುರುಗಿ ಮತ್ತು ಸುತ್ತಲಿನ ಪ್ರದೇಶದ ಭಾಷಾ ವ್ಯವಸ್ಥೆ ಉಪಭಾಷೆ, ಆಡು ನುಡಿಯ ಬಳಕೆಯಲ್ಲಿ ಇರುವ ಸಂಖ್ಯಾಚಕಗಳು, ಯಾದಗಿರಿ ಜಿಲ್ಲೆಯ ಜನಪದ ಕಥೆಗಳ ಭಾಷಿಕ ವಿಶ್ಲೇ಼ಷಣೆ, ಉಳ್ಳವರು ಶಿವಾಲಯವ ಮಾಡುವರು, ವೈಜ್ಞಾನಿಕ ವಿಶ್ಲೇ಼ಷಣೇ ಲೇಖನಗಳಿವೆ. ಮ.ಗು.ಬಿರಾದಾರ, ಬಿ.ಮಹಾದೇವಪ್ಪ, ಶಾಂತವೀರ, ಶಿವಚಾರ್ಯರ ಸಾಹಿತ್ಯ ಕುರಿತ ಬರಹಗಳು ಕೂಡ ಈ ಕೃತಿಯಲ್ಲಿದೆ. ಇಲ್ಲಿರುವ ಲೇಖನಗಳು ಭಾಷೆ, ಸಾಹಿತ್ಯ, ಸಾಹಿತ್ಯ ವಿಮರ್ಶೆಯನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯದ ಮೂಲ ಆಕಾರಗಳಾದ ಶಾಸನದಿಂದ ಪ್ರಾರಂಭಗೊಂಡು ಪ್ರಚಲಿತ ಸಾಹಿತ್ಯ ಚಟುವಟಿಕೆಗಳ ಆಭಿವ್ಯಕ್ತಿಯ ಸ್ವೂರೂಪವನ್ನು ಇಲ್ಲಿರುವ ಲೇಖನಗಳು ವಿವರಿಸುತ್ತದೆ.
©2024 Book Brahma Private Limited.