‘ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು’ ಕೃತಿಯು ಡಾ. ಎ.ಓ. ಆವಲ ಮೂರ್ತಿ ಅವರ ಭೌತವಿಜ್ಞಾನ ಚರಿತ್ರೆಯ ಒಂದು ಇಣುಕುನೋಟವಾಗಿದೆ. ಭೌತವಿಜ್ಞಾನದ 145 ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿಯಿದು. ವಿಜ್ಞಾನ ಕ್ಷೇತ್ರದ ಆವಿಷ್ಕಾರಗಳು ಸರಪಳಿಯಿದ್ದಂತೆ. ಜಗತ್ಪಸಿದ್ಧ ಸಾಧನೆಗಳು ಒಬ್ಬನೇ ವಿಜ್ಞಾನಿಯದೆಂದು ಕಿರೀಟ ತೊಡಿಸುವಂತಿಲ್ಲ. ಆ ಸಂಶೋಧನೆಗೆ ಹಿಂದಿನ ವಿಜ್ಞಾನಿಗಳು ತಳಪಾಯ ಹಾಕಿರುತ್ತಾರೆ. ಅವರೆಲ್ಲ ಶೇಖರಿಸಿದ್ದ ಮಾಹಿತಿಯನ್ನು ಜರಡಿ ಹಿಡಿದು ಸಿದ್ಧಾಂತಗಳಲ್ಲಿನ ಅಸಮರ್ಪಕವನ್ನಳಿಸಿ ಸಮರ್ಪಕ ವನ್ನುಳಿಸಿ ತನ್ನದನ್ನೂ ಕಸಿ ಮಾಡಿ ಜಗತ್ತು ಬೆರಗಾಗುವಂಥ ವಿಶ್ವದ ರಹಸ್ಯಗಳನ್ನು ಮುಂದಿನವರು ಹೊರಗೆಡಹುತ್ತಾರೆ. ವಿಶ್ವವು ಭೂಕೇಂದ್ರಿತವೆಂಬ ಕಲ್ಪನೆಯನ್ನೊಡೆದು ಸೂರ್ಯಕೇಂದ್ರಿತವೆಂದು ಸಾಧಿಸಿದ ಕೀರ್ತಿಗೆ ಹಲವು ವಿಜ್ಞಾನಿಗಳ ಶ್ರಮವಿದೆ. ಒಬ್ಬರ ಹೆಗಲಮೇಲೆ ಇನ್ನೊಬ್ಬರು ಏರಿ ಕುಳಿತು ಆಯಾ ಶಾಖೆಯನ್ನು ಹೇಗೆ ಎತ್ತರೆತ್ತರಕ್ಕೆ ಒಯ್ದಿದ್ದಾರೆ ಎಂಬುದನ್ನು ನಿರೂಪಿಸಲಾಗಿದೆ. ಹೀಗೆ ಊಹಿಸಿದವರು. ಮಾಹಿತಿ ಕಲೆ ಹಾಕಿದವರು. ಅನುಸರಿಸಿ ಮುನ್ನಡೆದವರು ಎಲ್ಲರೂ ಯಶಸ್ಸಿನಲ್ಲಿ ಪಾಲುದಾರರೇ. ಅಂಥ ಸ್ಮರಣೀಯ ವಿಜ್ಞಾನಿಗಳ ಪರಿಚಯವನ್ನು, ಅವರ ಸಾಧನೆಗಳನ್ನು, ಆ ಮೂಲಕ ಭೌತವಿಜ್ಞಾನದ ಬೆಳವಣಿಗೆಯ ಹಾದಿಯನ್ನು ಇಲ್ಲಿ ದಾಖಲಿಸಿದ್ದಾರೆ ಡಾ॥ ಎ. ಓ. ಆವಲ ಮೂರ್ತಿ.
©2024 Book Brahma Private Limited.