ಕನ್ನಡ ಬರಹದ ಪದಸಮಸ್ಯೆ

Author : ಡಿ.ಎನ್. ಶಂಕರ ಬಟ್

Pages 126

₹ 70.00

Buy Now


Year of Publication: 2021
Published by: ಡಿ.ಎನ್.ಶಂಕರ್ ಬಟ್
Address: # 394, 5ನೇ ಅಡ್ಡರಸ್ತೆ, ರೂಪನಗರ, ಮೈಸೂರು-570026

Synopsys

ಭಾಷಾ ಪರಿಣಿತ ಡಿ.ಎನ್. ಶಂಕರ ಬಟ್ ಅವರ ಕೃತಿ-ಕನ್ನಡ ಬರಹದ ಪದ ಸಮಸ್ಯೆ. ಅತಿಯಾದ ಸಂಸ್ಕೃತ ಪದಗಳ ಬಳಕೆಯೇ ಇವತ್ತು ಕನ್ನಡ ಬರಹಗಳನ್ನು ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆ. ಕನ್ನಡಿಗರ ಮಾತಿನಲ್ಲಿ ನೂರಕ್ಕೆ ಐದರಷ್ಟು ಸಂಸ್ಕೃತ ಪದಗಳು ಬಳಕೆಯಾಗುತ್ತಿದ್ದರೆ, ಬರಹಗಳಲ್ಲಿ ನೂರಕ್ಕೆ ನಲುವತ್ತು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕೃತ ಪದಗಳು ಬಳಕೆಯಾಗುತ್ತವೆ. ಇವನ್ನೆಲ್ಲ ಮಾತಿನಲ್ಲಿ ಇಲ್ಲವೇ ಓದಿನಲ್ಲಿ ಇರುವ ಹಾಗೆ ಬರೆಯದೆ ಸಂಸ್ಕೃತದಲ್ಲಿರುವ ಹಾಗೆ ಬರೆಯುವುದು ಈ ಸಮಸ್ಯೆಯನ್ನು ಹೆಚ್ಚು ಮಾಡಿದೆ. ಕನ್ನಡದ ವಿಜ್ಞಾನ ಬರಹಗಳಲ್ಲಂತೂ ಸಂಸ್ಕೃತದಲ್ಲಿ ಕಟ್ಟಿದ ಪಾರಿಭಾಷಿಕ ಪದಗಳು ತುಂಬಿಹೋಗಿವೆ. ಇವು ಕನ್ನಡ ಬರಹ ತುಂಬಾ ಕೃತಕವಾಗುವ ಹಾಗೆ ಮಾಡಿವೆ ಮತ್ತು ಅವುಗಳಲ್ಲಿ ಜೀವಂತಿಕೆ ಇಲ್ಲದಂತೆ ಮಾಡಿದೆ. ಇದಲ್ಲದೆ, ಕನ್ನಡ ಬರಹ ಸಮಾಜದ ಎಲ್ಲಾ ಜನರನ್ನೂ ತಲುಪುವಂತೆ ಮಾಡುವಲ್ಲಿ ಈ ಪದಸಮಸ್ಯೆ ಒಂದು ದೊಡ್ಡ ತೊಡಕಾಗಿದೆ. ಕನ್ನಡಿಗರ ಮಾತಿಗೂ ಬರಹಕ್ಕೂ ನಡುವಿರುವ ಅಂತರ ಈ ಪದಸಮಸ್ಯೆಯಿಂದಾಗಿ ತುಂಬಾ ಹೆಚ್ಚಾಗಿದೆ. ಈ ಸಮಸ್ಯೆಯ ನಿಜವಾದ ಸ್ವರೂಪ ಎಂತಹದು ಮತ್ತು ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಈ ಕಿರುಕಡತದಲ್ಲಿ ತೋರಿಸಿಕೊಡಲಾಗಿದೆ.

 

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books