ಪೊಮ್ಮದಿರ ಪೊನ್ನಪ್ಪ ಲಲಿತ ಕೆ.ಪಿ ಅವರ ಸಂಶೋಧಿತ ಕೃತಿಯಾಗಿದೆ. ಸಾಹಿತ್ಯದ ಹಾಗೂ ಸಂಶೋಧನೆಯಲ್ಲಿ ತೊಡಗಿರುವ ಲಲಿತ ಅವರು ಕೂಡಗಿನ ಚರಿತ್ರೆಯನ್ನು ಅಮೂಲಾಗ್ರವಾಗೆ ಬಲ್ಲವರು. ಅದರ ಒಂದು ಎಳೆಯನ್ನು ಕನ್ನಡ ರಂಗಭೂಮಿಗೆ ನೀಡಿದ್ದಾರೆ. ಮೊದಲ ಪ್ರಯತ್ನವಾದರೂ ಸಶಕ್ತ ಸಂಭಾಷಣೆ, ಪ್ರಬುದ್ಧವಾದ ನಿರೂಪಣೆ, ಅಲ್ಲಲ್ಲಿ ಬರುವ ಕೊಡವ ಭಾಷೆಯ ಹಾಡುಗಳು, ಅದಕ್ಕಿರುವ ಧ್ವನಿ, ವಿಶೇಷ ನುಡಿಗಟ್ಟು, ಪ್ರಾಂತೀಯ ಸೊಗಡು ನಾಟಕದ ಮೌಲ್ಯವನ್ನು ಹೆಚ್ಚಿಸಿದೆ. ಅವರಿಂದ ಮತ್ತಷ್ಟು ಕೊಡಗಿನ ಜಾನಪದ ಮತ್ತು ಐತಿಹಾಸಿಕ ವ್ಯಕ್ತಿಗಳ ಕುರಿತ ಕೃತಿಗಳು ಮೂಡಿಬರಲಿ ಬಿ.ವಿ. ರಾಜಾರಾಂ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.