ಲೇಖಕ ಎಚ್.ಕೆ. ರಂಗನಾಥ ರಾವ್ ಅವರ ಕೃತಿ ʻಮಾಸ್ತಿಯವರ ನಾಟಕಗಳುʼ. ಕನ್ನಡದ ಆಸ್ತಿ ಎಂದೇ ಪರಿಗಣಿತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಲ್ಲಿಯವರೆಗೆ ಬರೆದ ನಾಟಕಗಳ ಬಗ್ಗೆ ಈ ಕೃತಿಯು ಚರ್ಚಿಸುತ್ತದೆ. ಇಲ್ಲಿಯವರೆಗೆ ಮಾಸ್ತಿ ಅವರು ಹದಿಮೂರು ಸ್ವಂತ ನಾಟಕಗಳನ್ನು ಬರೆದಿದ್ದಾರೆ. ಬೇರೆ ಭಾಷೆಗಳಿಂದ ಎಂಟು ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ಧಾರೆ ಎನ್ನುವ ಮಾಹಿತಿಗಳನ್ನು ನೀಡುತ್ತಾ ರಂಗನಾಥ ರಾವ್ ಅವರು ಕೃತಿಯನ್ನು ಶುರುಮಾಡುತ್ತಾರೆ. ಮಾಸ್ತಿ ಅವರ ಸಾಹಿತ್ಯ ಬರಹ, 1933-38ರ ಅವಧಿಯಲ್ಲಿ ಬರೆದ ಮೊದಲ ನಾಟಕಗಳು, ಅವುಗಳ ವಿಶೇಷತೆ, ಆರಿಸಿಕೊಂಡ ವಸ್ತುಗಳು, ನಾಲ್ಕು ಐತಿಹಾಸಿಕ ನಾಟಕಗಳಾದ ʻತಾಳಿಕೋಟೆʼ, ʻಅನಾರ್ಕಲಿʼ, ʻಶಿವಛತ್ರಪತಿʼ ಮತ್ತು ʻಕಾಕನ ಕೋಟೆʼಯ ವಿಶೇಷತೆಗಳು, ಭಾಷಾಂತರಿಸಿದ ರವೀಂದ್ರನಾಥ ಠಾಕೂರರ ʻಚಿತ್ರಾಂಗದʼ ಹಾಗೂ ಶೇಕ್ಸ್‌ಪಿಯರ್‌ನ ಕೆಲವು ನಾಟಕಗಳಾದ ʻಹ್ಯಾಮ್‌ಲೆಟ್ʼ, ʻಲಿಯರ್ ಮಹಾರಾಜʼ, ಚಂಡಮಾರುತ, ʻದ್ವಾದಶರಾತ್ರಿʼ ಸೇರಿ ಹಲವಾರು ನಾಟಕಗಳನ್ನು ತಂದ ಕುರಿತಾಗಿ ಹಲವಾರು ವಿಚಾರಗಳ ಬಗ್ಗೆ ಇಲ್ಲಿ ಚರ್ಚಿಸಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ವಸ್ತು ಮತ್ತು ತಂತ್ರ, ಮೊದಲ ನಾಟಕಗಳು, ʻಮಂಜುಳಾʼ, ಗೀತನಾಟಕಗಳು, ಐತಿಹಾಸಿಕ ನಾಟಕಗಳು, ಕಾಕನಕೋಟೆ, ಭಕ್ತಿ ನಾಟಕಗಳು, ಭಾಷಾಂತರಗಳು, ಭಾಷೆ ಹಾಗೂ ನಾಟಕಕಾರ ಮಾಸ್ತಿ ಹೀಗೆ ಒಟ್ಟು ಹತ್ತು ಶೀರ್ಷಿಕೆಗಳ ಲೇಖನಗಳಿವೆ.
©2024 Book Brahma Private Limited.