ಅಶೋಕನೆಂಬ ಬುದ್ಧ ಬಿಂಬ ಬಸವರಾಜ ಕುಂಬಾರ ಅವರ ಕೃತಿಯಾಗಿದೆ. ಮನುಷ್ಯನ ಬದುಕನ್ನು ರೂಪಿಸುವುದು, ಅವನ ಜೀವನ ಶೈಲಿ ಮತ್ತು ಅವನ ಪರಿಸರ ಬದುಕು ಚಲನಶೀಲವಾದುದು, ನಿತ್ಯ ನಿರಂತರವೂ ಹೌದು. ಕಾಲಪ್ರವಾಹದಲ್ಲಿ ಕೊಚ್ಚಿಹೋಗುವ ಅವನ ಜೀವನದಲ್ಲಿ ನಡೆಯುವ ಘಟನೆಗಳು ಹಲವಾರು, ಬದುಕಿನಲ್ಲಿ ಎದುರಿಸುವ ಸಂಘರ್ಷಗಳೂ ಕೂಡಾ ಅನೇಕ ಈ ಎಲ್ಲವುಗಳನ್ನು ಅನುಭವಿಸಿದ ಮನುಷ್ಯನಿಗೆ ಕೆಲವೊಮ್ಮೆ ಜೀವನ ಅನ್ನುವುದು ಪೂರ್ವನಿಯೋಜಿತ ಅನಿಸಿದರೆ, ಮತ್ತೊಮ್ಮೆ ಆಕಸ್ಮಿಕ ಅನಿಸುತ್ತದೆ. ನಾವು ಬದುಕಿದ ರೀತಿ-ನೀತಿಗಳು, ನಮ್ಮ ಸುತ್ತಮುತ್ತಲಿನ ಘಟನೆಗಳು ಕೆಲವೊಮ್ಮೆ ನಮಗರಿಯದಂತೆ ಇತಿಹಾಸನವನ್ನೇ ನಿರ್ಮಿಸುತ್ತವೆ, ಮೊಗದೊಂದು ಇತಿಹಾಸ ನಮ್ಮನ್ನು ರೂಪಿಸುತ್ತಾ ಹೋಗುತ್ತದೆ. 'ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ದನ ಪ್ರಸಂಗ ನಮಗೆಲ್ಲ ತಿಳಿದೆ ಇದೆ. ಸಾವಿನ ಸಾರ್ವತ್ರಿಕತೆ, 'ಜಾತಸ್ಯ ಮರಣಂ ಧ್ರುವಂ' ಎನ್ನುವಂತೆ, ಆದರ ಅನಿವಾರ್ಯತೆ, ಅದು ಸಾಧಿಸುವ ಸಮಾನತೆ, ಅದರ ನಿರೀಕ್ಷಿತತೆ, ಅನಿರೀಕ್ಷಿತತೆ, ಅದು ಮನುಷ್ಯನ ಜೀವನದೊಳಕ್ಕೆ ಮುಗುವ ನಿತ್ಯ ನೂತನವೆನ್ನಿಸುವ ನೂರೆಂಟು ಬಗೆಗಳು ಎಲ್ಲವೂ ಅನುಭವವೇದ್ಯವಾದವುಗಳೆ, ಆದರೂ ಮನುಷ್ಯ ಎದುರಿಸುವ ಪ್ರತಿಯೊಂದು ಸಾವೂ ಅವನನ್ನು ವಿದ್ವಲಗೊಳಿಸುತ್ತದೆ, ತಲ್ಲಣವನ್ನುಂಟುಮಾಡುತ್ತದೆ.
©2024 Book Brahma Private Limited.