ಬೀದಿಯೊಳಗೊಂದು ಮನೆಯ ಮಾಡಿ

Author : ಎಸ್. ಸುರೇಂದ್ರನಾಥ್

Pages 74




Year of Publication: 2020
Published by: ನಾಕುತಂತಿ ಪ್ರಕಾಶನ
Address: #1162, 22ನೇ ಮುಖ್ಯ ರಸ್ತೆ, 23ನೇ ಮೈನ್, ಬಿ.ಎಸ್.ಕೆ 2ನೇ ಹಂತ, ಬೆಂಗಳೂರು-560070,
Phone: 8026713782

Synopsys

ಮರಾಠಿ ನಾಟಕ ನಿರ್ದೇಶಕ ಮೋಹಿತ್ ಟಾಕಲ್ಕರ್‌ ಅವರ ನಿರ್ದೇಶನದ ʻಉಣೇ ಪುರೇ ಶಹರ್‌ ಏಕ್‌ʼ ನಾಟಕದ ಕನ್ನಡಕ ಅನುವಾದ ಕೃತಿ ʻಬೀದಿಯೊಳಗೊಂದು ಮನೆಯ ಮಾಡಿʼ. ಲೇಖಕ ಎಸ್.‌ ಸುರೇಂದ್ರನಾಥ್‌ ಅವರು ಅನುವಾದಿಸಿದ್ದಾರೆ. ʻಮೈ ಸೂಂ ಯೂಸುಫ್‌ ಔರ್‌ ಯೇ ಹೈ ಮೇರಾ ಭಾಯಿʼ ಹಾಗೂ ಗಿರೀಶ್‌ ಕಾರ್ನಾಡರ ʻಬೆಂದಕಾಳು ಅನ್‌ ಟೋಸ್ಟ್‌ʼ ನಾಟಕಗಳನ್ನು ಆಧರಿಸಿ ಮೂಲ ಕೃತಿಯನ್ನು ರಚಿಸಲಾಗಿದೆ. ಗಣೇಶ ಚತುರ್ಥಿಯಂದು ಗಣೇಶ ವಿಸರ್ಜನೆ ದಿನ ಪುಣೆಯ ಬೀದಿಯೊಂದರಲ್ಲಿ ಮಧ್ಯವರ್ಗದ ಬ್ರಾಹ್ಮಣ ಸಂಸಾರಗಳ ನಡುವೆ ಮನೆ ಮಾಡಿರುವ ಒಂದು ಪುಟ್ಟ ಸಂಸಾರದ ಕತೆಯನ್ನು ಹೇಳುವ ನಾಟಕ ಹಲವಾರು ಪ್ರದರ್ಶನಗಳನ್ನು ಕಂಡಿದೆ.

About the Author

ಎಸ್. ಸುರೇಂದ್ರನಾಥ್

ಸುರೇಂದ್ರನಾಥ್ ಅವರು ಹುಟ್ಟಿದ್ದು ಮೂಡಬಿದರೆಯ ಸಮೀಪದ ಒಂದು ಹಳ್ಳಿಯಲ್ಲಿ. ಓದಿದ್ದು ಬೆಳೆದಿದ್ದು ದಾವಣಗೆರೆಯಲ್ಲಿ. ಓದಿನ ಸಮಯದಲ್ಲೇ ಸಾಹಿತ್ಯ, ನಾಟಕದ ಗೀಳು ಹತ್ತಿಸಿಕೊಂಡ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಾಟಕದ ತರಬೇತಿ ಪಡೆದರು. ಹೊಟ್ಟೆಪಾಡಿಗಾಗಿ ಒಂದಿಷ್ಟು ವರ್ಷಗಳು ಹಲವಾರು ಪತ್ರಿಕೆಗಳಲ್ಲಿ, ಜಾಹೀರಾತು ಕಂಪೆನಿಗಳಲ್ಲಿ ದುಡಿದಿದ್ದಾರೆ. ಬೆಂಗಳೂರಿನ ಸಂಕೇತ್ ತಂಡದಲ್ಲಿ ಸೇರಿ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆನಂತರ ಈಟಿವಿ ಸಂಸ್ಥೆಯನ್ನು ಸೇರಿದ ಅವರು ಹದಿಮೂರು ವರ್ಷಗಳ ಕಾಲ ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ, ರಂಗಭೂಮಿ ಒಡನಾಟಗಳೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಸುರೇಂದ್ರನಾಥ್ ಎರಡು ಕಥಾಸಂಕಲನಗಳು - ಕಟ್ಟು ...

READ MORE

Related Books