‘ನೆಲೆ ತಪ್ಪಿದ ಬಳ್ಳಿಗಳು’ ರಾಮಕೃಷ್ಣ ಎನ್ ಅವರ ನಾಟಕವಾಗಿದೆ. ನಾಟಕದ ಆರಂಭವೇ ಒಂದು ಘಟನೆ ನೆಡೆದೋಗಿದೆ ಎಂಬುವುದು ಸ್ಪಷ್ಟವಾಗುತ್ತದೆ. ನಂತರ ಬರುವ ದೃಶ್ಯಗಳಲ್ಲಿ ಅಣ್ಣ-ತಮ್ಮನ ಪ್ರೀತಿ ಮಮಕಾರಗಳ ಜೊತೆಗೆ ಮಲತಾಯಿಯ ಪ್ರೀತಿ ವಾತ್ಸಲ್ಯವೂ ಕಾಣಬಹುದಾಗಿದೆ. ನಾಟಕದ ಉದ್ದಕ್ಕೂ ನಿಷ್ಠಾವಂತ ಮಂತ್ರಿಯ ಪಾತ್ರ ಮಹತ್ವವಾದುದಾಗಿದೆ. ಜನರ ದೇವರಾದ ಮಹಾರಾಜರಿಗೆ ಕಾಡುವ ಸಂಕಷ್ಠಗಳು ಮತ್ತು ಅಧಿಕಾರದ ಆಸೆಯಿಂದ ತಂಗಿಯ ಮಾತುಗಳನ್ನು ಕೇಳಿ ತನ್ನನ್ನೆ ತಾನು ಮರೆತು ಮಾನವಿಯತೆ ಎನ್ನುವುದು ಬದಿಗಿಟ್ಟು ತನ್ನ ಸ್ವಾರ್ಥ ಆಲೋಚನೆಗಳಿಂದ ಚಿಕ್ಕ ಮಕ್ಕಳನ್ನು ಕಾಡಿಗೆ ಬಿಡುವ ಚಿತ್ರಣಗಳು ಗಂಭೀರವಾಗಿವೆ. ಕಾಡಿನ ನಡುವೆ ವಿಷ ಸರ್ಪಕಚ್ಚಿ ಬಿದ್ದಿದ್ದ ತಮ್ಮನನ್ನು ಉಳಿಸಿಕೊಳ್ಳಲು ಹತ್ತಿರದಲ್ಲಿದ್ದ ಊರಿಗೆ ಓಡಿ ಬಂದು ಗ್ರಾಮಸ್ಥರನ್ನು ಕರೆದುಕೊಂಡು ತಮ್ಮ ಇದ್ದ ಸ್ಥಳಕ್ಕೆ ಬಂದಾಗ ಅವನು ಅಲ್ಲಿರುವುದಿಲ್ಲ. ಮಕ್ಕಳನ್ನು ಕಳೆದುಕೊಂಡ ಚಿಂತೆಯಲ್ಲೇ ಕೊರಗುತ್ತ ಪ್ರಾಣ ಬಿಡುವ ಮಹರಾಜ, ಪಟ್ಟಕ್ಕೇರಿ ಮೆರೆಯುವ ರಾಣಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವ ಚಿತ್ರಣಗಳು ಕಾಣುತ್ತೇವೆ. ಅಣ್ಣ-ತಮ್ಮ ಇಬ್ಬರೂ ಎಲ್ಲೋ ಬೆಳೆದು ದೊಡ್ಡವರಾಗಿರುತ್ತಾರೆ. ಕೊನೆಗೆ ತಮ್ಮನಿಗೆ ಹುಡುಗಿಯನ್ನು ಹುಡುಕಿಕೊಂಡು ಬಂದಾಗ ನಿಶ್ಚಿತಾರ್ಥದ ಸಮಯದಲ್ಲಿ ತಮ್ಮ ಪರಿಚಯ ಹೇಳುವಾಗ, ದೈವಲೀಲೆ ಎಂಬಂತೆ ಅಣ್ಣ- ತಮ್ಮ ಇಬ್ಬರು ಒಂದಾಗುವುದರ ಮೂಲಕ ನಾಟಕ ಮುಕ್ತಾಯವಾಗುತ್ತದೆ ಎಂದು ಲೇಖಕ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.