ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರ ವಿಶಿಷ್ಟ ನಾಟಕ ಮಾಯಾದಂಡ. ಶೇಕ್ ಸ್ಪಿಯರ್ ಬದುಕೆಂಬ ನಾಟಕ ಎಂಬ ತಳಶೀರ್ಷಿಕೆ ಇರುವ ಈ ನಾಟಕದಲ್ಲಿ ಶೇಕ್ಸ್ಪಿಯರ್ ರಚಿತ ನಾಟಕಗಳ ಪಾತ್ರ, ಘಟನೆಗಳು ಅವನ ಬದುಕಿನ ಪಾತ್ರ ಘಟನೆಗಳೊಳಗೆ ಒಂದಾಗಿ ಹೋಗಿರುವ ಪರಿ ಅದ್ಭುತ. ಶೇಕ್ ಸ್ಪಿಯರ್ ನ ಕಾಂತಸಮ್ಮಿತ ಪ್ರತಿಭಾ(ಮ)ಲೋಕಕ್ಕೆ ಓದುಗರನ್ನು ಎಲ್ಫಿರೂಪಿ ಸೂತ್ರಧಾರಿಗಳು ಎತ್ತೊಯ್ದು ಎಲ್ಲವನ್ನು ಮರೆಸಿ ಮಹಾಮೌನವೊಂದನ್ನು ಎದೆಯಲ್ಲಿ ಕಸಿಮಾಡುತ್ತವೆ. ಇಂಗ್ಲಿಷ್ ಸಾಹಿತ್ಯ ವಲಯ ಬೆರಗು ಪಡುವಂತೆ, ಭಾರತೀಯ ಸಾಹಿತ್ಯ ವಲಯ ಶೇಕ್ ಸ್ಪಿಯರ್ ಏನು ಕನ್ನಡಿಗನೇನೊ ಎಂದು ಪರಿಭಾವಿಸುವಂತೆ ಈ ಕೃತಿ ಒಡಮೂಡಿದೆ. ಐದು ಅಂಕಗಳಿಸಿದ ಕಟ್ಟಲ್ಪಟ್ಟ ಈ ಪ್ರಯೋಗಾತ್ಮಕ ನಾಟಕಕ್ಕೆ ಖ್ಯಾತ ವಿಮರ್ಶಕ ರಾಜೇಂದ್ರ ಚೆನ್ನಿ ಮುನ್ನುಡಿ, ಅಪ್ರತಿಮ ರಂಗಕರ್ಮಿ ಬಿ ಆರ್ ವಿಜಯವಾಮನ್ ಬೆನ್ನುಡಿ ಇದೆ.
©2024 Book Brahma Private Limited.