‘ಸುವರ್ಣ ಕರ್ನಾಟಕ- ಶಾಲಾ ಮಕ್ಕಳ ನಾಟಕಗಳು’ (ಎಂಟು ಸಂಪುಟಗಳು) ಕೃತಿಯನ್ನು ಹಿರಿಯ ಲೇಖಕ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಬಿ.ವಿ. ರಾಜಾರಾಂ ಅವರು ಸಂಪಾದಿಸಿದ್ದಾರೆ. ಶಾಲಾ ಮಕ್ಕಳಿಗಾಗಿ ಬರೆದ 50 ನಾಟಕಗಳು ಎಂಟು ಸಂಪುಟಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಸಮಕಾಲೀನ ವಿಚಾರಗಳನ್ನಿಟ್ಟುಕೊಂಡೇ ಮಕ್ಕಳ ಮನಸ್ಸಿನಲ್ಲಿ ಉತ್ತಮ ಮೌಲ್ಯಗಳನ್ನು ತುಂಬುವಂತೆ ಈ ನಾಟಕಗಳನ್ನು ರಚಿಸಿದ್ದಾರೆ.
ಪುಸ್ತಕ ಪರಿಚಯ: ಹೊಸತು-2009 ಮೇ
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಬಿ. ವಿ. ರಾಜಾರಾಂ ಸಂಪಾದಕತ್ವದಲ್ಲಿ ಪುಟ್ಟ ಮಕ್ಕಳಿಗಾಗಿ ಅಭಿನಯಿಸಲು ಐವತ್ತು ನಾಟಕಗಳು ಎಂಟು ಸಂಪುಟಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಉತ್ತಮ ಮೌಲ್ಯಗಳು ಎಳೆಯರ ಮನಸ್ಸಿನಲ್ಲಿ ಬೇರೂರಬಹುದಾದಂಥ ನೀತಿಪ್ರಧಾನವಾದ ಈ ನಾಟಕಗಳನ್ನು ನಾಡಿನ ಪ್ರಸಿದ್ಧ ಲೇಖಕರು ಬರೆದುಕೊಟ್ಟಿದ್ದಾರೆ. ಮನರಂಜನೆಯ ದೃಷ್ಟಿಯಿಂದಲೂ, ಬೌದ್ಧಿಕ ಬೆಳವಣಿಗೆಯ ಕಾರಣಕ್ಕೂ ಇವನ್ನು ಮಕ್ಕಳಿಂದಲೇ ಅಭಿನಯಿಸಿ ಪ್ರಯೋಗಿಸಿದರೆ ಪರಿಣಾಮ ತುಂಬ ಚೆನ್ನಾಗಿರಬಹುದು. ಸಮಕಾಲೀನ ವಸ್ತು ವೈವಿಧ್ಯವಿದ್ದು ವಿಚಾರಪ್ರಚೋದಕ ವಿಷಯಗಳಿವೆ.
©2025 Book Brahma Private Limited.