ಪ್ರಜೆಗಳನ್ನು ಧ್ವನಿಗಳಿಂದ ಬದಲಿಸಬಹುದು ಯಾರು ನಂಬುವದಿಲ್ಲವೋ ಅವ್ರಿಗೆ ಎಲ್ಲ ಪುರಾವೆಗಳು ನಿಜ ಅನಿಸುವದಿಲ್ಲ. ನನಗೂ ಅವನಿಗೂ ಉಳಿದಿರುವ ಸಂಬಂಧವಾದರೂ ಏನು ? ಸತ್ಯದ ಒಬ್ಬ ವ್ಯಕ್ತಿಯ ಕೋರಿಕೆಗಿಂತ ಅಸತ್ಯದ ಪ್ರಜಾ ಕೋರಿಕೆ ಹೆಚ್ಚಾದಾಗ ..ಬಹುಮತದ ದುರಂತ ಪ್ರಜಾಪ್ರಭುತ್ವದ ದುರಂತವಾಗುವದು ಅನಿವಾರ್ಯ. ಸ್ತ್ರೀವಾದ ಎತ್ತಿ ಹಿಡಿಯುವ ಈ ನಾಟಕ ತನ್ನ ಆಶಯ ಮುಟ್ಟುತ್ತದೆ. ಕರ್ಣನ ತಾಯಿ : ಎಲ್ಲರಿಗೂ ಗೊತ್ತಿದ್ದ ಕಥೆ. ಆದರೆ ಹೇಳುವ ರೀತಿ ಹೊಸದು. ಕುಂತಿ ಕರ್ಣನ ಎದುರು ತೀರ ಸಾಮಾನ್ಯ ಆಗಿಬಿಡುತ್ತಾಳೆ ಅವಕಾಶವಾದಿ ಆಗುತ್ತಾಳೆ. "ತಾಯಂದಿರ ಒಡಲು ಯಾವಾಗ ಶಮನವಾಗುವದು ದೇವರೇ" ಅನ್ನುವ ಮಾತು ಬರೀ ಶಬ್ದಗಳಾಗುತ್ತವೆ . ನಾಟಕ ಬರೆಯುವದು ಸ್ವಲ್ಪು ಕಠಿಣ ಕೆಲಸ. ಬರೆಯುವವರಿಗೆ,ಮಾಡುವವರಿಗೆ ಗೊತ್ತಾಗುತ್ತದೆ. ಕಾದಂಬರಿ ಕಥೆ, ಕವನ ಬರಿಯುವಷ್ಟು ಸರಳವಲ್ಲ. ಅದೊಂದು ಸಂಯುಕ್ತ ಸೃಜನಶೀಲ ಕೆಲಸ. ಜೀವನದ ಪ್ರತಿಬಿಂಬ ನಾಟಕ ಅನ್ನೋದಕ್ಕಾಗಿ ಅದು ಎಲ್ಲರಿಗೂ ಬೇಕು, ಎಲ್ಲರೂ ಅದಕ್ಕೆ ಬೇಕು. ಮಾತು ಮಾತಿನಲ್ಲಿ : ಸರಳವಾದ ಹಾಸ್ಯ ನಾಟಕ "ಮಾತು ಮಾತಿನಲ್ಲಿ. "ಇಂಗ್ಲಿಷ್ ಮತ್ತು ಕನ್ನಡ" ಭಾಷೆಯ ಶಬ್ದ ಮತ್ತು ಅರ್ಥಗಳ ಆಟದಿಂದ ನಗೆ ಹುಟ್ಟಿಸಿಕೊಳ್ಳುತ್ತದೆ. ಆದರೆ ಹರಟೆ ನಗೆಯಿಂದ ಹೊರ ಬರುವುದೇ ಇಲ್ಲ ಅನ್ನುವದು ಪ್ಲಸ್ ಅಥವಾ ಮೈನಸ್ ಅನ್ನೋದು ನಟ ನಿರ್ದೇಶಕರ ಸಾಮರ್ಥ್ಯ ಅವಲಂಬಿಸಿರುತ್ತದೆ. ಮೊಬೈಲ್ ಉಪವಾಸ : ತಿಳಿಹಾಸ್ಯವೇ ಪ್ರಧಾನವಾಗಿದೆ ಇಲ್ಲಿ ನಟ ನಟಿಯರ ಚಕಚಕಯ್ತೆಯ ಸಂಬಾಷಣೆಯೇ ಮುಖ್ಯ. ಮನೆಯೇ ಮೊದಲ ಪಾಠಶಾಲೆ : ಸಾಲಿ ಪುಸ್ತಕದಾಗ ಇರಬಹುದಾದ ಶೈಕ್ಷಣಿಕ ನಾಟಕ . ಒಂದು ರೀತಿಯಿಂದ ಒಳ್ಳೇದು. ಇಲ್ಲಿ ಸಹ ತಿಳಿ ಹಾಸ್ಯವೇ ಮೂಲದ್ರವ್ಯ. ಹಂಗ ನೋಡಿದ್ರ ರಂಗಭೂಮಿನ್ನ ಶಿಕ್ಷಣಕ್ಕಾಗಿ ಬಳಸಕೊಳ್ಳುವ ವಿಚಾರ ಇದ್ರ ಇಲ್ಲ ಎಲ್ಲಾ ನಾಟಕಾನೂ ನೂರಕ್ಕೆ ನೂರರಷ್ಟು ಪಾಸ್. ಬಾಯ್ ಒನ್ ಗೇಟ್ ಒನ್ ಫ್ರಿ : ಮತ್ತೊಂದು ತಿಳಿ ಹಾಸ್ಯದ ನಾಟಕ ಮಧ್ಯಮ ವರ್ಗದ ಹಪಾಪಿತನ ಎತ್ತಿತೋರಿಸುವ ಲಘು ನಾಟಕ. ಗೌರಿ ಪೂಜಾ : ಅತ್ಯಂತ ಚಿಕ್ಕ ನಗಿನಾಟಕ ಅದ. ಆದರ ಕನ್ನ ಮುಚ್ಚಿ ಕಣ್ಣ ತೆಗಿದುರೊಳಗ ಮುಗದು ಹೋಗ್ತದ. ಸ್ತ್ರೀ ಸ್ವಾತಂತ್ರಮ್ ಅರ್ಹತಿ : ನಾಟಕ ಒಂದು ರೀತಿಯ ಆಕ್ಯಾಡೆಮಿಕ್ ತಂತ್ರ ಆಧಾರಿತವಾಗಿರುವ ಕಾರಣ ಕಾಲೇಜುಗಳಿಗೆ , ಮಹಿಳಾ ಮಂಡಲಗಳ ವಿವಿಧ ವಿನೋದಾವಳಿಗಳಿಗೆ ಮತ್ತು ರೇಡಿಯೋ ನಾಟಕಸ್ವರೂಪ ಹೊಂದಿದೆ. ಮುಸುಕಿದೀ ಮಬ್ಬಿನಲಿ : ವಿಚಾರ ಪ್ರಚೋದಕವಾಗಿದ್ದು ಒಂದಿಷ್ಟು ಸಾಯೋ ಆಟ ಮತ್ತು ಜಾತ್ರೆ ನಾಟಕಗಳನ್ನ ನೆನಪಿಗೆ ತಂದರೆ ಆಶ್ಚರ್ಯವಲ್ಲ ನಾಟಕೀಯ ಅಂಶಗಳು ಇದನ್ನ ಭಿನ್ನವಾಗಿ ನಿಲ್ಲಿಸುತ್ತವೆ .
©2024 Book Brahma Private Limited.