ರೈತರ ಆತ್ಮಹತ್ಯೆಯ ವಸ್ತುವನ್ನಾಧರಿಸಿ ರಚಿತವಾದ ಕೃತಿ ಲೇಖಕ ಬಸವರಾಜ ಸಬರದ ಅವರ ‘ಸಬರದ ಬೀದಿ ನಾಟಕಗಳು’. ಸಾಲದ ಹೆಣ, ಹಿಂದುಳಿದ ವರ್ಗಗಳ ಮಹಿಳೆಯರಿಗೆ ರಾಜಕೀಯ ಅಧಿಕಾರ ಬಂದಾಗ ಸಮಾಜ ಅವರನ್ನು ನೋಡುವ ಪರಿ ವಿವರಿಸುವ ‘ಹನುಮಾಯಣ’, ‘ರಂಪಾಯಣ’, ‘ಹನುಮನಾಯಕ’ದಂಥಹ ನಾಟಕಗಳು ಓದುಗರಿಗೆ ತೀರಾ ಹತ್ತಿರವಾಗುತ್ತವೆ. 12 ನಾಟಕಗಳು ಈ ಕೃತಿಯಲ್ಲಿವೆ. ದೇಸಿ ಸೊಗಡಿನ ಹಾಡುಗಳು ಇಲ್ಲಿದ್ದು, ಮನರಂಜನೆ, ಆಕ್ರೋಶ, ಸಂದೇಶ ಎಲ್ಲವನ್ನೂ ಮಿಳಿತಗೊಳಿಸಿ ಹೊಸೆದ ನಾಟಕಗಳು ಈ ಕೃತಿಯಲ್ಲಿವೆ. ಬೀದಿ ನಾಟಕ ಆಸಕ್ತರಿಗೆ, ರಂಗಕರ್ಮಿಗಳಿಗೆ, ವಿದ್ಯಾರ್ಥಿಗಳಿಗೆ ಉಪಯೋಗವಾಗಬಲ್ಲ ಕೃತಿ ಇದಾಗಿದೆ. ಸಮುದಾಯ ಸಂಘಟನೆಯ ಜಾಥಾಗಳ ಸಂದರ್ಭದಲ್ಲಿ, ಜನ ಜಾಗೃತಿ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲೆಂದೇ ಬರೆದ ನಾಟಕಗಳ ಗುಚ್ಛ ಸಬರದ ಬೀದಿ ನಾಟಕಗಳು.
©2024 Book Brahma Private Limited.