ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

Author : ಡಿ.ಎನ್. ಶಂಕರ ಬಟ್

Pages 248

₹ 190.00




Year of Publication: 2014
Published by: ಬಾಶಾ ಪ್ರಕಾಶನ
Address: ಡಿ.ಎನ್.ಶಂಕರ್ ಬಟ್, ಅಂಚೆ : ಬಿ.ಮಂಚಾಲೆ, ಸಾಗರ 577431

Synopsys

ಸಂಸ್ಕೃತ ಹಾಗೂ ಇತರೇ ಭಾಷೆಗಳಿಂದ ಕನ್ನಡ ಭಾಷೆಗೆ ಪದಗಳನ್ನು ಎರವಲು ಪಡೆಯುವುದು ಹೊಸದೇನಲ್ಲ. ಆದರೆ ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಭಾಷೆಯನ್ನು ಕಟ್ಟುವ ಸಲುವಾಗಿ ಶಂಕರ ಭಟ್‌ ಅವರ ಈ ಪ್ರಯತ್ನದ ಫಲವೇ ಕನ್ನಡದಲ್ಲೇ ಹೊಸ ಪದವನ್ನು ಕಟ್ಟುವ ಬಗೆ ಪುಸ್ತಕ. ಶೀರ್ಷಿಕೆಯೇ ಹೇಳುವಂತೆ ಈ ಕೃತಿಯಲ್ಲಿ ಕನ್ನಡ ಹೊಸ ಪದ ನುಡಿಗಟ್ಟುಗಳನ್ನು ಕಟ್ಟುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ಇದೊಂದು ರೀತಿಯಲ್ಲಿ ಚಟುವಟಿಕೆಯಲ್ಲಿ ತೊಡಗಿಸುವ ಪುಸ್ತಕವಾಗಿದೆ. ನೀವು ಕನ್ನಡದಲ್ಲಿ ಪದ ಕಟ್ಟಲು ಪ್ರಯತ್ನಿಸುವ ಆಸಕ್ತಿ ಇದ್ದರೆ ತಪ್ಪದೇ ಈ ಕೃತಿಯನ್ನು ಓದಿ ತಿಳಿದುಕೊಳ್ಳಿ.

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books