ಕನ್ನಡದ ಪ್ರಮುಖ ತತ್ವಪದಕಾರರಲ್ಲಿ ಒಬ್ಬರಾದ ಕಡಕೋಳ ಮಡಿವಾಳಪ್ಪ ನೇರ-ನಿರ್ಭಿಡೆಯ ಕವಿ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಕಲಬುರ್ಗಿ ಜಿಲ್ಲೆಯ ಕಡಕೋಳದವರಾದ ಮಡಿವಾಳಪ್ಪ ತನ್ನ ಪ್ರಖರ ವಿಚಾರಗಳನ್ನು ತತ್ವಪದಗಳಲ್ಲಿ ದಾಖಲಿಸಿದವರು. ಸಮಾಜದ ಅರೆಕೊರೆಗಳನ್ನು ತಿದ್ದುವ ಉದ್ದೇಶದಿಂದ ಕಟುವಾದ ಪದಗಳಲ್ಲಿ ತನ್ನ ಹಾಡುಗಳನ್ನು ಬರೆದ ಮಡಿವಾಳಪ್ಪ ಅವರು ತತ್ವಪದಗಳ ಸಾಲಿಗೆ ಹಲವು ಶಿಷ್ಯರನ್ನೂ ಸೇರಿಸಿದವರು. ಈ ಸಂಪುಟದಲ್ಲಿ ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತತ್ವಪದಗಳನ್ನು ಸಂಕಲಿಸಲಾಗಿದೆ.
©2024 Book Brahma Private Limited.