ಹುತ್ತದಲ್ಲಿ ಹುತ್ತ

Author : ಟಿ.ಪಿ. ಕೈಲಾಸಂ

Pages 144

₹ 60.00




Published by: ಅಂಕಿತ ಪುಸ್ತಕ
Address: 53 ಶಾಮ್‌ಸಿಂಗ್‌, ಕಾಂಪ್ಲೆಕ್ಸ್‌, ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 0802661 7100

Synopsys

ಹೆಸರಾಂತ ನಾಟಕಕಾರ ಹಾಗೂ ಸಾಹಿತಿ ಟಿ.ಪಿ. ಕೈಲಾಸಂ ಅವರು ರಚಿಸಿದ ನಾಟಕಗಳಲ್ಲಿ ʻಹುತ್ತದಲ್ಲಿ ಹುತ್ತʼ ಒಂದು. ಉಳಿದ ಇವರ 17 ನಾಟಕಗಳಿಗಿಂತ ಇದು ತುಸು ಭಿನ್ನವಾಗಿ ಕಾಣುವ ನಾಟಕವಾಗಿದೆ. ಇಲ್ಲಿನ ಕಥಾವಸ್ತುವು ಸ್ವಾತಂತ್ರ್ಯಪೂರ್ವ ಭಾರತದಲ್ಲಿದ್ದ ಉನ್ನತ, ಶ್ರೀಮಂತ ಕುಲದವರ ದುರಾಸೆ ಮತ್ತು ಮಹತ್ವಾಕಾಂಕ್ಷೆ ಕುರಿತಾಗಿದೆ. ಅವರ ಜೀವನಕ್ಕೆ ನಮ್ಮನ್ನು ರಸವತ್ತಾದ ಹಾಸ್ಯದ ಮೂಲಕ ಈ ಕೃತಿಯು ಕರೆದೊಯ್ಯುತ್ತದೆ.

About the Author

ಟಿ.ಪಿ. ಕೈಲಾಸಂ
(26 July 1885 - 23 November 1946)

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...

READ MORE

Related Books