ಖ್ಯಾತ ಸಾಹಿತಿ ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್) ಅವರ ಸಮಗ್ರ ನಾಟಕಗಳ ಕೃತಿ ಇದು. ಚದುರಂಗರು ಕುಮಾರರಾಮ (1966), ಇಲಿಬೋನು(1972), ಹಾಗೂ ಬಿಂಬ (1990) ನಾಟಕಗಳನ್ನು ರಚಿಸಿದ್ದು, ವಸ್ತು ವಿಷಯಗಳು ಸಮಾಜದ ಮೌಢ್ಯಾಚರಣೆಗಳನ್ನು ವ್ಯಂಗ್ಯವಾಡಿ, ವೈಜ್ಞಾನಿಕತೆಯನ್ನು ಬೆಳೆಸುವತ್ತ ಇವರ ನಾಟಕಗಳು ಹೊಸ ಚಿಂತನೆಯನ್ನು ಪ್ರೇರೇಪಿಸುತ್ತವೆ. ಸಾಮಾಜಿಕ ನಡೆಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ನೀಡುತ್ತವೆ.
ಹೊಸತು - ಸಪ್ಟೆಂಬರ್-2001
ಸಮಗ್ರ ನಾಟಕಗಳು ಪಂಥಗಳಿಂದಲೂ ಪಡೆದು ಅಗ್ರಪಂಕ್ತಿಯಲ್ಲಿ ಎತ್ತರವಾಗಿ ನಿಲ್ಲಬಲ್ಲಂಥ ಕೃತಿ ರಚನೆ ಮಾಡಿದ ಸಾಹಸಿ ಶ್ರೀ ಚದುರಂಗರು. ಅವರ ನಾಲ್ಕೂ ನಾಟಕಗಳ ಸಮಗ್ರ ಸಂಗ್ರಹವಿದು. ಅಸಹಜತೆಯಿಂದ ಸಹಜತೆಗೆ ಜಿಗಿಯುವ, ಭೂತ-ಭವಿಷ್ಯತ್‌ಗಳಿಗಿಂತ ವರ್ತಮಾನಕ್ಕೇ ಹೆಚ್ಚಿನ ಪ್ರಾಧಾನ್ಯತೆ ನೀಡುವ, ಅಸಾಮಾನ್ಯ ಮಾನವ ಸ್ವಭಾವಗಳನ್ನು ಪರಿಚಯಿಸುವ ಅವರ ನಾಟಕಗಳ ಮೋಡಿ ಅದ್ಭುತವಾಗಿದೆ.
©2024 Book Brahma Private Limited.