ಡಾ. ರಾಜೇಶ್ ಶರ್ಮ ಅವರು ಆಯುರ್ವೇದ ಮಹತ್ವ ಕುರಿತಂತೆ ರಚಿಸಿದ ಕೃತಿಯನ್ನು ಲೇಖಕ ಡಾ. ಬಿ.ಆರ್. ಸುಹಾಸ್ ಅವರು ‘ಆಯುರ್ವೇದ ಸಂಪೂರ್ಣ ಮಾರ್ಗದರ್ಶಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಆಯುರ್ವೇದವು ಭಾರತೀಯ ಮೂಲಕ ಒಂದು ಪ್ರಾಚೀನ ವಿಜ್ಞಾನ. ‘ಆಯು’ ಎಂದರೆ ಜೀವ ಎಂದೂ ವೇದ ಎಂದರೆ ಶಾಸ್ತ್ರ ಎಂದೂ ಅರ್ಥ: ಅಂದರೆ ಆಯುರ್ವೇದವು ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ನೆರವಾಗುವ ವಿಜ್ಞಾನ. ಈ ಕುರಿತಂತೆ ವಿವರ ಮಾಹಿತಿಯುಳ್ಳ ಕೃತಿ ಇದು. ಆಯುರ್ವೇದೀಯ ವೈದ್ಯಕೀಯ ಗುಣಗಳೊಂದಿಗಿನ ಸಾಮಾನ್ಯ ಚಿಕಿತ್ಸೋಪಾಯಗಳು ಹಾಗೂ ಸಾಮಾನ್ಯ ಕಾಯಿಗಳಿಗೆ ಮನೆ-ಔಷಧಿಗಳು ಸೇರಿದಂತೆ, ಆಯುರ್ವೇದದ ಬಗೆಗಿನ ಇದುವರೆಗಿನ ಜ್ಞಾನ ವೂ ಈ ಕೃತಿಯನ್ನು ಒಳಗೊಂಡಿದೆ
©2024 Book Brahma Private Limited.