ಆಯುರ್ವೇದ ಮತ್ತು ಮಹಿಳಾ ಆರೋಗ್ಯ ಪುಸ್ತಕವನ್ನು ಲೇಖಕಿಯರಾದ ಶುಭಶಂಕರಿ ಪಿ. ರಾವ್ ಮತ್ತು ಗೀತಾ ಶ್ರೀನಿವಾಸನ್ ಅವರು ರಚಿಸಿದ್ದಾರೆ. ಆರೋಗ್ಯ ಬರಹಗಳ ಸಂಕಲನ ಇದಾಗಿದೆ. ಆರೋಗ್ಯ ಮತ್ತು ಸೌಂದರ್ಯ ಪ್ರತಿ ಹೆಣ್ಣಿನ ಮನದಾಳದ ಆಶಯ. ಆಯುರ್ವೇದವು ಹೆಣ್ಣಿನ ಆರೋಗ್ಯವನ್ನಷ್ಟೇ ಅಲ್ಲ, ಸೌಂದರ್ಯವೃದ್ಧಿಯನ್ನೂ ತುಂಬಿಕೊಡುತ್ತದೆ ಎಂಬ ಅಂಶವನ್ನೂ ಇಲ್ಲಿ ಕಾಣಬಹುದು. ಹೆಣ್ಣಿನ ಬಾಲ್ಯಾವಸ್ಥೆ, ಯೌವನ, ಗರ್ಭಿಣಿ, ಬಾಣಂತಿಚರ್ಯೆ, ಮಧ್ಯವಯಸ್ಸು, ರಜೋನಿವೃತ್ತಿ, ವೃದ್ಧಾಪ್ಯ – ಈ ಎಲ್ಲ ಹಂತಗಳ ಕುರಿತಾದ ಆರೋಗ್ಯ ಮಾಹಿತಿಗಳು ಈ ಕೃತಿಯಲ್ಲಿ ಲಭ್ಯ. ಸೌಂದರ್ಯವೃದ್ಧಿಗೂ ಆಯುರ್ವೇದೀಯ ಸುಲಭೋಪಾಯಗಳನ್ನು ಈ ಪುಸ್ತಕದಲ್ಲಿ ಸೂಚಿಸಲಾಗಿದೆ.
©2025 Book Brahma Private Limited.