ಸ್ವಯಂ ವೈದ್ಯ ಎಂಬುದು ರಾಘವೇಂದ್ರ ಗುರೂಜಿ (ತಿರುಕ) ಅವರು ಬರೆದ ಕೃತಿ. ರೋಗ ಬಂದಾಗ ವೈದ್ಯರ ಬಳಿಗೆ ಹೋಗುವುದು ಸಾಮಾನ್ಯ. ಆದರೆ, ರೋಗವೇ ಬರದಂತೆ ನೋಡಿಕೊಳ್ಳುವುದು ಉತ್ತಮವಲ್ಲವೆ? ಗುರೂಜಿ ಅವರು ಸ್ವತಃ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದೊಂದಿಗೆ ಈ ಕೃತಿ ರಚಿಸಿದ್ದು, ಮನೆಯ ಸುತ್ತಮುತ್ತ ದೊರಕುವ ಎಲೆಬಳ್ಳಿಗಳು, ಗಿಡಮರಗಳ ಬಗ್ಗೆ ತಿಳಿದಿರಬೇಕು. ಅವು ಅಗತ್ಯ ಔಷಧಿಯನ್ನು ಪೂರೈಸುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ, ಆಪತ್ತಿನ ಸಮಯದಲ್ಲಿ ಆತ್ಮರಕ್ಷಣೆಯನ್ನೆಲ್ಲ, ನೆರೆಯವರಿಗೆ ಉಪಕಾರಿಯಾಗಬಲ್ಲ ಎಂಬ ಆತ್ಮವಿಶ್ವಾಸವನ್ನು ಕನ್ನಡಿಗರಲ್ಲಿ ಮೂಡಿಸುವ ಜನಕಲ್ಯಾಣದ ಸದುದ್ದೇಶದಿಂದ ರಚಿತವಾದ ದೀರ್ಘ ಅಧ್ಯಯನ, ಸಂಶೋಧನೆ, ಪ್ರಯೋಗಗಳ ರಸಭಟ್ಟಿಯಾದ ಗ್ರಂಥ ‘ಸ್ವಯಂವೈದ್ಯ‘ ಆಗಿದೆ. .
©2024 Book Brahma Private Limited.