ಸಸ್ಯ ಜಾನಪದದ್ದು ವಿಸ್ಮಯ ಲೋಕ, ಪ್ರಕೃತಿಯ ಕೂಸಾದ ಮನುಕುಲ ದೀರ್ಘ ಕಾಲದ ಅನುಭವದಿಂದ ಪ್ರಕೃತಿಯಲ್ಲಿ ಹೇರಳವಾಗಿರುವ ಸಸ್ಯ ಸಮೂಹದ ಉಪಯೋಗವನ್ನು ಅರಿತು; ಅವು ಆಹಾರಕ್ಕೂ ವೈದ್ಯ ಚಿಕಿತ್ಸೆಗೂ ಉಪಯುಕ್ತವೆಂಬುದನ್ನು ತಿಳಿದುಕೊಂಡಿತು, ಅಡ್ಡ ಪರಿಣಾಮವಿಲ್ಲದೆ ಗಿಡಮೂಲಿಕೆಗಳನ್ನು ಅನಾರೋಗ್ಯ ನಿವಾರಣೆಗೆ ಧಾರಾಳವಾಗಿ ಬಳಸಲಾಯಿತು. ಈ ಅರಿವನ್ನು ಆಧುನಿಕ ವೈಜ್ಞಾನಿಕ ಪ್ರಯೋಗಕ್ಕೆ ಅಳವಡಿಸಿ, ಫಲಿತವನ್ನುಸಂಗ್ರಹಿಸಿದ್ದರೆ, ಕಡಮೆ ಖರ್ಚಿನಲ್ಲಿ ಸರಳ ವಿಧಾನದಲ್ಲಿ ಔಷಧಿಯಾಗಿ ಉಪಯೋಗಿಸಬಹುದು. ನಿರುಪಯುಕ್ತ ಎಂದು ನಿರ್ಲಕ್ಷಿಸಿರುವ ಕಳೆಗಳ ಔಷಧಿಗಳಾಗಬಲ್ಲವೆಂಬುದು ಆಶ್ಚರ್ಯ ಹುಟ್ಟಿಸುತ್ತವೆ. ನಮ್ಮ ಸುತ್ತಮುತ್ತ ಇರುವ ಕಳೆಗಳ ತಿಳಿವಳಿಕೆ ನಮಗಿರಬೇಕು, ಅಷ್ಟೆ, ಶ್ರೀಮತಿ ಶಾಂತಿನಾಯಕರು ಕಳೆದ ಮೂರುನಾಲ್ಕು ದಶಕಗಳಿಂದ ಸಸ್ಯ ಜಾನಪದದ ಅಧ್ಯಯನದಲ್ಲಿ ತೊಡಗಿದ್ದಾರೆ. ಸಸ್ಯಗಳ ಗುಣ ವಿಶೇಷಗಳನ್ನು ಅರಿತು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ, ಶಾಂತಿನಾಯಕರ ಸಸ್ಯಜ್ಞಾನ ನಿಜಕ್ಕೂ ಮೆಚ್ಚುವಂಥದ್ದು. ಪ್ರಸ್ತುತ ಗ್ರಂಥದಲ್ಲಿ ಕೆಲವು ಕಳೆಗಳ ಉಪಯುಕ್ತತೆಯ ಪರಿಚಯವಿದೆ ಎಂದು ಪ್ರೊ. ಡಿ. ಲಿಂಗಯ್ಯ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.