ಚೈನಾ ಮತ್ತು ಭಾರತದ ನಡುವಿನ ಪಶ್ಚಿಮ ಮತ್ತು ಮಧ್ಯಮ ಕ್ಷೇತ್ರಗಳ ಗಡಿವಿವಾದಗಳ ಕುರಿತು ಲೇಖಕ ಯಡೂರ ಮಹಾಬಲ ಆಳವಾದ ಅಧ್ಯಯನ ಮಾಡಿದ್ದಾರೆ. ಭಾರತ-ಚೀನಾ ಗಡಿ ವಿವಾದದ ಬಗ್ಗೆ ಸುದೀರ್ಘವಾಗಿ ಅರಿತು ಇಲ್ಲಿ ವಿವರಿಸಿದ್ದಾರೆ. ಅದರ ಕುರಿತಾಗಿಯೇ “ಅವಿಸ್ಮರಣೀಯ ಅರುಣಾಚಲ” ಮತ್ತು “ನಿಗೂಢ ಟಿಬೇಟ್” ಎಂಬ ಎರಡು ಪುಸ್ತಕಗಳನ್ನು ಬರೆದಿದ್ದು ಪ್ರಸ್ತುತ ಕೃತಿ ಆ ಸರಣಿಯ ಮೂರನೆಯ ಪುಸ್ತಕವಾಗಿದೆ. ವಿವಾದದ ಭೂಪಟಗಳು ಮತ್ತು ದಾಖಲೆಗಳನ್ನು ಒದಗಿಸುವ ಮೂಲಕ ಲೇಖಕರು ಭಾರತ-ಚೀನಾ ಗಡಿವಿವಾದವನ್ನು ಶಾಸ್ತ್ರೀಯವಾಗಿ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
©2024 Book Brahma Private Limited.