ಮೆಟ್ಟಿನ ಪದಗಳು ರಾ.ಹ ಕೊಂಡಕೇರ ಅವರ ಕೃತಿಯಾಗಿದೆ. ಅನಾದಿ ಕಾಲದಿಂದಲೂ ಬಾವಲತ್ತಿಯ ಶ್ರೀ ಲಕ್ಷ್ಮೀ ರಂಗನಾಥನ ಮೇಲೆ ದಾಸರು ಹಾಡಿಕೊಂಡು ಬಂದ ಪದಗಳೇ ಶ್ರೀ ಲಕ್ಷ್ಮೀ ರಂಗನಾಥನ ಮೆಟ್ಟಿನ ಪದಗಳು, ಮೆಟ್ಟಿನ ಪದಗಳು ಎಂದರೆ ಶ್ರೀ ರಂಗನಾಥನು ತನ್ನ ಜಾತ್ರೆ, ಕಾರ್ತಿಕ ಮಾಸ ಮುಂತಾದ ಸಮಯದಲ್ಲಿ ಊರೊಳಗೆ ಬರುತ್ತಾನೆ. ಹೀಗೆ ಬರುವ ಅವನಿಗೆ ಒಂದೊಂದು ಮೆಟ್ಟಿನಲ್ಲಿ (ಜಾಗದಲ್ಲಿ) ಒಂದೊಂದು ಪದ ಹಾಡಲಾಗುತ್ತದೆ. ಅದಕ್ಕಾಗಿ ಈ ಪದಗಳಿಗೆ 'ಮೆಟ್ಟಿನ ಪದಗಳು ಎಂದು ಕರೆಯುತ್ತಾರೆ. ಶ್ರೀ ರಂಗನಾಥನು ಒಂದೊಂದು ಮೆಟ್ಟಿನಲ್ಲಿ ಕನಿಷ್ಠ ಪಕ್ಷ ಒಂದು ಗಂಟೆಯ ಕಾಲದವರೆಗೂ ನಿಲ್ಲುತ್ತಾನೆ ಆಗ ಅವನಿಗೆ ಆಯಾ ಮೆಟ್ಟಿನಲ್ಲಿ ಅಂತಹುದೇ ಪದ ಸ್ತುತಿಸುವ ನಿಯಮ ಕೂಡ ಇದೆ. ಈ ಕಾರಣದಿಂದಲೇ ಈ ಪದಗಳಿಗೆ ಮೆಟ್ಟಿನ ಪದಗಳು ಎಂದು ಕರೆಯುವುದುಂಟು. ಬಾವಲತ್ತಿಯ ಶ್ರೀ ರಂಗನಾಥನ ಕುರಿತು 1893 ರಲ್ಲಿ ಹಿಂಹ ಚರ್ಮ ಹಾಕಿ ಬರೆದಿಟ್ಟಿದ್ದ ಹಳಗನ್ನಡದ ಕೆಲವು ಮೆಟ್ಟಿನ ಪದಗಳನ್ನು ಹೊಸಗನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಡಿನ ಅನೇಕ ಹೆಸರಾಂತ ದೇವಾಲಯಗಳಲ್ಲಿ ಇಲ್ಲದ ಇಂಥಹ ಪದಗಳನ್ನು ಶ್ರೀ ರಂಗನಾಥನ ಸನ್ನಿದಾನದಲ್ಲಿ ಹಾಡಲಾಗುತ್ತಿದ್ದು, ಇದು ಕರ್ನಾಟಕದಲ್ಲೇ ಅತ್ಯಂತ ವಿಶಿಷ್ಟ ಹಾಗೂ ವಿಶೇಷ ವಾಗಿದೆ. ಇಂತಹ ವಿಶೇಷತೆಗಳಿಂದ ಕೂಡಿರುವ ಮೆಟ್ಟಿನ ಪದಗಳನ್ನು ಕೊಂಡಕೇರ ಅವರು ಈ ಪುಸ್ತಕದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ಸಾಹಿತಿಯಾಗಿ ಪ್ರಸಿದ್ಧಿಯನ್ನು ರಾಮಪ್ಪ, ಎಚ್. ಪಡೆದಿರುವ ರಾಮಪ್ಪನವರು, ರಂಗನಾಥ ಸ್ವಾಮಿಯ ಮೇಲಿರುವ ಭಕ್ತಿ ಹಾಗೂ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಕಾಪಾಡಬೇಕು ಎನ್ನುವ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಿದ್ದು, ರಂಗನಾಥಸ್ವಾಮಿಯ ಭಕ್ತರೆಲ್ಲರೂ ತಮ್ಮ ಬಳಿ ಇಟ್ಟುಕೊಳ್ಳಬೇಕಾದ ಅಪರೂಪದ ಪುಸ್ತಕವಾಗಿದೆ.
©2024 Book Brahma Private Limited.