ನಾಟಕರಂಗದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಮತ್ತು ಮೈಸೂರು ರಂಗಾಯಣದ ನಿರ್ದೇಶಕ, ಲೇಖಕ ಅಡ್ಡಂಡ ಸಿ. ಕಾರ್ಯಪ್ಪ ಅವರ ನಾಟಕ ಕೃತಿ ʻಟಿಪ್ಪು ನಿಜಕನಸುಗಳುʼ. ಮೈಸೂರಿನ ಹುಲಿ ಎಂದೇ ಕರೆಯಲಾಗುವ ಟಿಪ್ಪು ಸುಲ್ತಾನ್ ಅವರ ಇತಿಹಾಸದ ಕೆಲವು ಘಟನೆಗಳನ್ನು ದೃಶ್ಯಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಈ ಕೃತಿ. ಪ್ರಸ್ತುತ ಟಿಪ್ಪುವಿನ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಹರಿದಾಡುತ್ತಿರುವ ಆಪಾದನೆಗಳಿಗೆ ಉತರ ಎನ್ನುವಂತೆ ಅವರ ಬದುಕಿನ ಕತೆಯನ್ನು ಅತ್ಯಂತ ವಿಭಿನ್ನ ಶೈಲಿಯಲ್ಲಿ ಲೇಖಕರು ಹೇಳಿದ್ದಾರೆ. ಕೃತಿಗೆ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಮುನ್ನುಡಿಯಿದೆ. ಚಿಂತಕ, ಲೇಖಕ ಚಕ್ರವರ್ತಿ ಸೂಲಿಬೆಲೆ ಬೆನ್ನುಡಿ ಬರೆದಿದ್ದಾರೆ.
©2025 Book Brahma Private Limited.