ಚಿತ್ತಗಾಂಗ್ ನ ಕ್ರಾಂತಿಕಾರಿ ಮಹಿಳೆಯರ ಕುರಿತು ಲೇಖಕಿ ಚೈತನ್ಯ ಪಿಂಗಳಿ ಅವರು ತೆಲುಗು ಭಾಷೆಯಲ್ಲಿ ಬರೆದಿದ್ದನ್ನು ಹಿರಿಯ ಲೇಖಕ ಸ. ರಘುನಾಥ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಚಿತ್ತಗಾಂಗ್ : ವಿಪ್ಲವ ವನಿತೆಯರು. ಚೈತನ್ಯ ಪಿಂಗಳಿ ಅವರಿಗ ಚರಿತ್ರೆ ಮತ್ತು ಸಮಾಜ ಆಸಕ್ತಿಯ ಕ್ಷೇತ್ರಗಳು. ಈ ವಿಭಾಗಗಳನ್ನು ಶೋಷಣೆ, ಜಾತಿಯ ನೆಲೆಯಲ್ಲಿ ಅರ್ಥೈಸಬೇಕು ಎಂಬುದು ಅವರ ಅಭಿಪ್ರಾಯ. ದೇಶದ ಸ್ವಾತಂತ್ಯ್ರಕ್ಕಾಗಿ ಚಿತ್ತಗಾಂಗ್ ನಲ್ಲಿ ನಡೆದ ಹೋರಾಟವು ರಕ್ತಸಿಕ್ತವಾಗಿತ್ತು. ಬ್ರಿಟಿಷರ ಕಾನೂನುಗಳು ಜೀವಬಲಿ ತೆಗೆದುಕೊಳ್ಳುತ್ತವೆ ಎಂದು ಗೊತ್ತಿದ್ದರೂ ಆ ಅಧಿಪತ್ಯದ ಎದುರು ಹೋರಾಟಕ್ಕಿಳಿಯುವ ಮಹಿಳೆಯರ ಧೀರತನವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಸ್ತ್ರೀಪರ ಚಿಂತನೆ, ಸ್ವಾತಂತ್ಯ್ರ ಸಂಗ್ರಾಮದಲ್ಲಿ ಅವರ ಪಾತ್ರ, ತ್ಯಾಗ, ಹೋರಾಟ, ಸಹಿಷ್ಣುತಾ ಮನೋಭಾವ ಇತ್ಯಾದಿ ಕೃತಿಯಲ್ಲಿ ಅಡಕವಾಗಿವೆ. 2016ರಲ್ಲಿ, ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಯುವ ಪುರಸ್ಕಾರ ಪ್ರಶಸ್ತಿ ನೀಡಿದೆ.
©2024 Book Brahma Private Limited.