ಭಾರತದ ಇತಿಹಾಸವೆಲ್ಲ ವಿದೇಶಿ ಆಕ್ರಮಣಕಾರರ ವಿರುದ್ಧ ಸಾವಿರಾರು ವರ್ಷಗಳಿಂದ ಹೋರಾಟ ಮಾಡಿ ಜಯಶಾಲಿಯಾದ ಇತಿಹಾಸ. ಆದರೆ ನಮ್ಮ ಪಠ್ಯ ಪುಸ್ತಕದಲ್ಲಿ ಭಾರತದ ಇತಿಹಾಸವೆಂದರೆ ಆರ್ಯರ - ಇರಾನಿಯನ್ನರ - ಅರಬ್ಬರ - ತುರುಕರ - ಪರ್ಷಿಯನ್ನರ - ಪೋರ್ಚುಗೀಸರ - ಡಚ್ಚರ - ಫ್ರೆಂಚರ ಮತ್ತು ಬ್ರಿಟಿಷರ ಆಕ್ರಮಣಗಳ ಇತಿಹಾಸವೆಂದು ವರ್ಣಿಸಲಾಗಿದೆ. ಆದರೆ ವೀರರ ಶೂರರ ಸಂತತಿಯಾದ ಹಿಂದೂಗಳನ್ನು ಬಲಹೀನರೆಂದು ಚಿತ್ರಿಸಲಾಯಿತು. ಆದರೀ ಚಿತ್ರಣಕ್ಕೆ ಮೀರಿ ಭಾರತಭೂಮಿಯ ಇತಿಹಾಸದಲ್ಲಿ ಯುಗನಿರ್ಮಾಪಕನಾಗಿ ನಿಂತು, ಉತ್ಕೃಷ್ಟ ನಾಯಕತ್ವ ನಿರ್ವಹಿಸಿ, ಹಿಂದೂಗಳಿಗೆ ರಾಜಕೀಯ ಶಕ್ತಿ ಮರಳಿ ನೀಡಿ, ರಾಷ್ಟ್ರೀಯತೆಯ ಪುನರುತ್ಥಾನದ ಸಂಕೇತವೆಂದೆನ್ನಿಸಿಕೊಂಡಿರುವ ಧ್ಯೇಯಜೀವಿ ಸಾಮ್ರಾಟನೇ 'ಶಿವಾಜಿ'. ಅಂತಹ ಶಿವಾಜಿಯ ಕುರಿತ ಪುಸ್ತಕವಿದು.
https://www.kannadapustaka.net/product/dhyeya-jeevi-samrata/
ಭಾರತದ ಇತಿಹಾಸವೆಲ್ಲ ವಿದೇಶಿ ಆಕ್ರಮಣಕಾರರ ವಿರುದ್ಧ ಸಾವಿರಾರು ವರ್ಷಗಳಿಂದ ಹೋರಾಟ ಮಾಡಿ ಜಯಶಾಲಿಯಾದ ಇತಿಹಾಸ. ಆದರೆ ನಮ್ಮ ಪಠ್ಯ ಪುಸ್ತಕದಲ್ಲಿ ಭಾರತದ ಇತಿಹಾಸವೆಂದರೆ ಆರ್ಯರ - ಇರಾನಿಯನ್ನರ - ಅರಬ್ಬರ - ತುರುಕರ - ಪರ್ಷಿಯನ್ನರ - ಪೋರ್ಚುಗೀಸರ - ಡಚ್ಚರ - ಫ್ರೆಂಚರ ಮತ್ತು ಬ್ರಿಟಿಷರ ಆಕ್ರಮಣಗಳ ಇತಿಹಾಸವೆಂದು ವರ್ಣಿಸಲಾಗಿದೆ. ಆದರೆ ವೀರರ ಶೂರರ ಸಂತತಿಯಾದ ಹಿಂದೂಗಳನ್ನು ಬಲಹೀನರೆಂದು ಚಿತ್ರಿಸಲಾಯಿತು. ಆದರೀ ಚಿತ್ರಣಕ್ಕೆ ಮೀರಿ ಭಾರತಭೂಮಿಯ ಇತಿಹಾಸದಲ್ಲಿ ಯುಗನಿರ್ಮಾಪಕನಾಗಿ ನಿಂತು, ಉತ್ಕೃಷ್ಟ ನಾಯಕತ್ವ ನಿರ್ವಹಿಸಿ, ಹಿಂದೂಗಳಿಗೆ ರಾಜಕೀಯ ಶಕ್ತಿ ಮರಳಿ ನೀಡಿ, ರಾಷ್ಟ್ರೀಯತೆಯ ಪುನರುತ್ಥಾನದ ಸಂಕೇತವೆಂದೆನ್ನಿಸಿಕೊಂಡಿರುವ ಧ್ಯೇಯಜೀವಿ ಸಾಮ್ರಾಟನೇ 'ಶಿವಾಜಿ'. ಇನ್ನು ಶಿವಾಜಿಯೆಂದರೆ ಅಫ್ಜಲಖಾನನನ್ನು ಕೊಂದವ, ಪನ್ನಾಳಗಢದಿಂದ ರಾತ್ರೋರಾತ್ರಿ ತಪ್ಪಿಸಿಕೊಂಡವ, ಮಿಠಾಯಿ ಬುಟ್ಟಿಯೊಳಗೆ ಕುಳಿತು ಗೃಹಬಂಧನದಿಂದ ಹೊರಬಂದ ರೋಚಕ ಘಟನೆಗಳ ಕಥಾನಾಯಕನೆಂದೆಷ್ಟೇ ತಿಳಿದುಕೊಂಡಿದ್ದೆವು. ಶಿವಾಜಿಯನ್ನು ಮತಾಂಧ, ಲೂಟಿಕೋರ, ಬಂಡುಕೋರ ಎಂದು ಜರೆದದ್ದೂ ಇದೆ. ಆದರೆ ಕೇವಲ ೫೦ ವರ್ಷ ಬದುಕಿದ ಸಾಮಾನ್ಯ ಸರದಾರನೊಬ್ಬನ ಮಗ, ಅಬೇಧ್ಯವಾದ ಸಾಮ್ರಾಜ್ಯವನ್ನು ಕಟ್ಟಿ ಛತ್ರಪತಿಯಾಗಿ ಮೆರೆದ ಇತಿಹಾಸವನ್ನು ನಾವೆಲ್ಲರೂ ತಿಳಿದುಕೊಳ್ಳಲೇಬೇಕು. ಸ್ವತಂತ್ರ್ಯ 'ಹಿಂದವೀ' ಸಾಮ್ರಾಜ್ಯ ಸ್ಥಾಪನೆಗೆ ಶಹಾಜಿ ತನ್ನ ಮನದಾಳವನ್ನು ವ್ಯಕ್ತಪಡಿಸಿದ ರೀತಿ; ಅಸತ್ಯ, ಅಧರ್ಮದ ವಿರುದ್ಧ ಹೋರಾಡಲು, ಧರ್ಮಾಧಾರಿತ ರಾಷ್ಟ್ರನಿರ್ಮಾಣದ ಅವಶ್ಯಕತೆಯನ್ನು ಮನಗಂಡು ಧೀರ ಮಗನೊಬ್ಬನ ಜನ್ಮಕ್ಕಾಗಿ ಅಪೇಕ್ಷೆಪಟ್ಟ 'ಜೀಜಾಬಾಯಿ'; ವಿದೇಶಿ ಆಕ್ರಮಣಕಾರರು ಹಿಂದೂ ರಾಜರನ್ನು ಸುಲಭವಾಗಿ ಸೋಲಿಸಲು ಕಾರಣಗಳು, ಸ್ವರಾಜ್ಯದ ಆಡಳಿತ ಮತ್ತು ಸೇನೆಯ ಉಸ್ತುವಾರಿ ಹೊರಲು ಯೋಗ್ಯ ಕಾರ್ಯಕರ್ತರ ಪಡೆಯೊಂದಕ್ಕೆ ತರಬೇತಿ ನೀಡಿ ಶಿವಾಜಿಗೆ ಅರ್ಪಿಸಿದ 'ದಾದಾಜಿಕೊಂಡದೇವ'; ಸ್ವರಾಜ್ಯದ ನಿರ್ಮಾಣದ ಸಂದರ್ಭದಲ್ಲಿ ಶಿವಾಜಿ ಎದುರಿಸಿದ ಸನ್ನಿವೇಶಗಳು ಮತ್ತು ಸವಾಲುಗಳು; ಅಫ್ಜಲಖಾನನನ್ನು ಎದುರಿಸುವ ಯೋಜನೆಯಲ್ಲಿ ಶಿವಾಜಿ ಪ್ರದರ್ಶಿಸಿದ ಪ್ರಚಂಡ ಆತ್ಮಬಲ; ಶತ್ರು ಪಾಳಯದಿಂದ ಬಂದು ಶಿವಾಜಿಯ ನಂಬಿಕೆಯ ಸಿಪಾಯಿಯಾಗಿ ಕೊನೆಗೆ ಶಿವಾಜಿಗಾಗಿ ಪ್ರಾಣತ್ಯಾಗ ಮಾಡಿ, ಸ್ವಾಮಿನಿಷ್ಠೆ ಮೆರೆದ ಶಿಸ್ತಿನ ಸಿಪಾಯಿ 'ಬಾಜಿಪ್ರಭು'; ರಾಷ್ಟ್ರ ಮತ್ತು ವೈಯುಕ್ತಿಕ ಉಳಿವಿನ ವಿಚಾರ ಬಂದಾಗ ರಾಷ್ಟ್ರವೇ ಪ್ರಧಾನವೆನಿಸಿ ಪ್ರಾಣತ್ಯಾಗ ಮಾಡಿದ ಕ್ಷೌರಿಕ 'ಶಿವಕಾಶೀದ'. ರಣತಂತ್ರದಲ್ಲಿ ಶಿವಾಜಿಯ ಸರ್ವಶ್ರೇಷ್ಠತೆಯನ್ನು ಸಿದ್ಧಪಡಿಸುವ ಮಿಠಾಯಿ ಬುಟ್ಟಿಯ ಕಥೆ; ಮೊಘಲರ ಬೃಹತ್ ಸೈನ್ಯವನ್ನೇ ಬಗ್ಗುಬಡಿಯಲು ಶಿವಾಜಿ ಅಳವಡಿಸಿದ ಅಸಾಮಾನ್ಯ ಗೆರಿಲ್ಲಾ ಯುದ್ಧತಂತ್ರ; ತಾನಾಜಿ ಪ್ರದರ್ಶಿಸಿದ ಆತ್ಮಸಮರ್ಪಣೆ ಮತ್ತು ಶೌರ್ಯ; ಮತಾಂತರಿತರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದು ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆಯಲ್ಪಡುವಂತೆ ಮಾಡಿದ ನೇತಾಜಿ ಪಾಲ್ಕರನ ಕಥೆ; ಶಿವಾಜಿಗಿದ್ದ ಭೌಗೋಳಿಕ ಜ್ಞಾನ, ಕೋಟೆಗಳ ಮಹತ್ವ, ಸರ್ವಪಂಥ ಸಮದೃಷ್ಟಿ, ಸಾಮಾಜಿಕ ಸುಧಾರಣೆಗಳು, ನಿಷ್ಪಕ್ಷಪಾತೀ ಆಡಳಿತ; 'ಮಾತೃವತ್ ಪರದಾರೇಷು' ಎಲ್ಲ ಸ್ತ್ರೀಯರೂ ತಾಯಿಯ ಸಮಾನರೆಂಬ ಭಾವನೆ; ಆತ್ಮಾಹುತಿ ; ಶಿವಾಜಿಯ ವ್ಯಕ್ತಿತ್ವ; ಸ್ವರಾಜ್ಯಕ್ಕಾಗಿ ಶಿವಾಜಿಯ ಸಹಚರರ ಸಮರ್ಪಿತ ಜೀವನ ; ವಿದೇಶಿ ಆಕ್ರಮಣಕಾರದ ಭೀಷಣ ಆಡಳಿತದ ನಂತರ ಶಿವಾಜಿಯ ನೇತೃತ್ವದಲ್ಲಿ ನಡೆದ 'ರಾಷ್ಟ್ರನಿರ್ಮಾಣ' ಕಾರ್ಯದ ಯಶಸ್ವೀ ಪ್ರಯೋಗ; ಭಾರತದ ಇತಿಹಾಸ ಗುಲಾಮಗಿರಿಯ ಇತಿಹಾಸವಲ್ಲ ಅದು ಸಂಘರ್ಷದ ಇತಿಹಾಸವೆಂದು ತೋರಿಸಿಕೊಟ್ಟ ಛತ್ರಪತಿ ಶಿವಾಜಿಯ ಜೀವನ ನೋಟ ; ಇವುಗಳೆಲ್ಲವನ್ನು ಡಾ|| ನಾರಾಯಣ ಶೆಣೈ ಕೆ. ತಮ್ಮದೇ ಆದ ಶೈಲಿಯಲ್ಲಿ, ಸರಳ ಭಾಷೆಯಲ್ಲಿ, ವಿಷಯಗಳನ್ನು ಸಣ್ಣ ಸಣ್ಣ ಅಧ್ಯಾಯಗಳ ಮೂಲಕ ಓದುಗರಿಗೆ ತಿಳಿಸುವ ಪುಟ್ಟ ಪ್ರಯತ್ನವೇ ಈ ಪುಸ್ತಕ.
©2024 Book Brahma Private Limited.