ಇತಿಹಾಸಕಾರರಾಗಿ ಚಿರಪರಿಚಿತರಾಗಿರುವ ಮತ್ತು ಸೊಂದಾ ಇತಿಹಾಸ ಕುರಿತು ಆಳವಾದ ಅಧ್ಯಯನ ಮತ್ತು ಸಂಶೋಧನೆಗೆ ಹೆಸರಾಗಿರುವ ಲಕ್ಷ್ಮೀಶ್ ಹೆಗಡೆ ಸೋಂದಾ ಅವರ ಕೃತಿ. ಸೋದೆ ಸದಾಶಿವರಾಯರ ನಿಗೂಢ ಆತ್ಮಕಥನ ಇದಾಗಿದೆ.ಅರಸರ ಆಳ್ವಿಕೆಯ ಕಾಲದಲ್ಲಿ ರಾಜಧಾನಿಯಾಗಿದ್ದ ಸೋದೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಈಗಿನ ಸೋಂದಾ. ಸೋದೆ ಸದಾಶಿವರಾಯ ಅರಸ ಮಾತ್ರವಲ್ಲದೆ ವಿದ್ವಾಂಸನೂ ಆಗಿದ್ದ. ಚರಿತ್ರೆಯ ಪುಟಗಳಲ್ಲಿ ಮರೆಯಾಗಿ ಹೋದವನ ಕಥನವನ್ನು ಈ ಕೃತಿ ತೆರೆದಿಡುತ್ತದೆ. ಕನ್ನಡ, ಸಂಸ್ಕೃತ, ಉರ್ದು, ಮರಾಠಿ ಭಾಷೆಗಳಲ್ಲಿ ಪರಿಣತನಾಗಿದ್ದ ಸದಾಶಿವರಾಯ, ಹದಿನೇಳು ಕೃತಿಗಳನ್ನು ರಚಿಸಿದ್ದ ಎನ್ನುತ್ತಾರೆ ಇತಿಹಾಸಕಾರರು. ಆತನ ಕುರಿತ ಅಪರೂಪದ ವೃತ್ತಾಂತವಾಗಿ ಅನುರಾಯ ಶಾಲ್ಮಲೆ ಗಮನ ಸೆಳೆಯುತ್ತದೆ.
©2024 Book Brahma Private Limited.