ಧೀರ ಟಿಪ್ಪುವಿನ ಲಾವಣಿಗಳು ಲಿಂಗದೇವರು ಹಳೆಮನೆ ಅವರ ಕೃತಿಯಾಗಿದೆ. ಸಾಮಾನ್ಯವಾಗಿ ಜನರಿಗೆ ಹತ್ತಿರವಾಗಿ ಬದುಕಿದ್ದವರ ಕುರಿತು ಮಾತ್ರ ಜನಪದ ಸಾಹಿತ್ಯ ಹುಟ್ಟಿಕೊಳ್ಳುತ್ತದೆ. ಇತಿಹಾಸದ ಪ್ರಮುಖ ಘಟನೆಗಳಲ್ಲಿ ಭಾಗಿಯಾದವರು, ಅಥವಾ ಅದಕ್ಕೆ ಸಾಕ್ಷಿಯಾದವರು, ತಮ್ಮ ನೆನಪುಗಳನ್ನು ಮೌಖಿಕ ರೂಪದಲ್ಲಿ ದಾಖಲಿಸಿಕೊಳ್ಳುತ್ತಾರೆ. ಲಾವಣಿಗಳು ಅಂಥ ಪ್ರಮುಖ ದಾಖಲೆಗಳು, ಅವು ಆ ಕಾಲಘಟ್ಟದಲ್ಲಿ ಬದುಕಿದ್ದ ಜನರ ಮನದಾಳದಲ್ಲಿ ಹುದುಗಿದ್ದ ವೈಯಕ್ತಿಕ ಅನುಭವಗಳನ್ನು ಹಾಡಿನ ಮೂಲಕ ಜನರಿಗೆ ತಿಳಿಸಿಹೇಳುತ್ತವೆ. ಉವಣಿ ಬರೆದವನಿಗೆ ಅಥವಾ ಲಾವಣಿ ಹಾಡುವವನಿಗೆ ಲಾವಣೆಯಲ್ಲಿ ಕಂಡರಿಸಲಾದ ನಾಯಕನ ಬಗ್ಗೆ ನೋಡಿ, ಕೇಳಿ, ನೇರವಾಗಿ ಗೊತ್ತಿರುತ್ತದೆ. ಇತಿಹಾಸದ ವ್ಯಕ್ತಿಯೊಬ್ಬ ಜನಸಾಮಾನ್ಯರೊಡನೆ ಸಂಪರ್ಕ ಸಾಧಿಸದೇ ಇದ್ದರೆ ಅವನ ಬಗ್ಗೆ ಲಾವಣಿಗಳು ಹುಟ್ಟುವುದಿಲ್ಲ ಇಂಥ ನೆನಪುಗಳನ್ನು ಒರೆಸಿ ಹಾಕುವ ಪ್ರಯತ್ನಗಳು ನಡೆಯುತ್ತಿರುವಾಗ, ಟಿಪ್ಪುವಿನ ಲಾವಣಿಗಳು ಮತ್ತೆ ಪ್ರಕಟವಾಗಿ ಓದುಗರಿಗೆ ದೊರೆಯುತ್ತಿರುವುದು ಸಂತೋಷ ಎನ್ನುತ್ತಾರೆ ಪುರುಷೋತ್ತಮ ಬಿಳಿಮಲೆ.
©2024 Book Brahma Private Limited.