ಕುಖ್ಯಾತ ಬರ್ಬರ ಸಾಮ್ರಾಟನ ಇತಿಹಾಸದ ಕಥನ ಎಂಬ ಉಪಶೀರ್ಷಿಕೆಯಡಿ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ರಚಿಸಿದ ಕೃತಿ-ಚೆಂಗೀಸ್ ಖಾನ್. ಮಂಗೋಲ ಸಾಮ್ರಾಜ್ಯದ ಚಕ್ರಾಧಿಪತಿ ಚೆಂಗೀಸ್ ಖಾನ್, ಮಧ್ಯ ಏಷಿಯಾದ ಬಹಳಷ್ಟು ಪ್ರದೇಶಗಳನ್ನು ಮತ್ತು ಚೀನಾ ದೇಶಾಡಳಿತವನ್ನು ಈತ ಅತಿಕ್ರಮಿಸಿಕೊಂಡಿದ್ದ. ಈಶಾನ್ಯ ಏಷಿಯಾದ ಅನೇಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನು ಒಂದುಗೂಡಿಸಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಈತನು ತಾನು ಗೆದ್ದ ಎಲ್ಲ ಪ್ರದೇಶಗಳನ್ನು ಮಕ್ಕಳು ಮೊಮ್ಮಕ್ಕಳು ಮಧ್ಯೆ ಹಂಚಿದ. ತಾಂಗೂಟರನ್ನು ಸೋಲಿಸಿದ ನಂತರ (1227) ಆತ ಮರಣ ಹೊಂದಿದ. ಈತನ ಶವವನ್ನು ರಹಸ್ಯ ಸ್ಥಳದಲ್ಲಿ ಸಮಾಧಿ ಮಾಡಲಾಯಿತು. ಈತನ ಮರಣ ಹೇಗೆ ಸಂಭವಿಸಿತು ಎಂಬ ಬಗ್ಗೆ ಹತ್ತು ಹಲವು ಸಂಶಯಗಳಿವೆ. ತಾಂಗೂಟರು ಯುದ್ಧದಲ್ಲಿ ಈತನನ್ನು ಸಾಯಿಸಿದರೆಂದು, ಕುದುರೆ ಮೇಲೆ ಕುಳಿತಿದ್ದ ಈತ ತಲೆ ಸುತ್ತು ಬಂದು ತೀರಿಕೊಂಡ ಎಂದೂ ಹೇಳಲಾಗುತ್ತದೆ. ಚೆಂಗೀಸ್ ಖಾನ್ ನ ಇಚ್ಛೆಯಂತೆ ಆತನ ಶವವನ್ನು ರಹಸ್ಯ ಸ್ಥಳದಲ್ಲಿ ಸಮಾಧಿ ಮಾಡಲಾಯಿತು. ಈ ಸಂಗತಿ ಯಾರಿಗೂ ತಿಳಿಯದಂತಿರಲು, ದಾರಿಯಲ್ಲಿ ಸಿಕ್ಕ ಯಾರನ್ನೇ ಆಗಲಿ, ಸೈನಿಕರು ಅವರನ್ನು ಕೊಂದು ಹಾಕಿದರು. ಮಂಗೋಲಿಯಾ ದೇಶವು ಈತನನ್ನು ಮಂಗೋಲ್ ಚಕ್ರಾಧಿಪತ್ಯದ ಪಿತಾಮಹ ಎಂದು ಗೌರವ ನೀಡುತ್ತದೆ. ಇಂತಹ ಚಕ್ರವರ್ತಿಯ ಕುರಿತು ಬರೆದ ಇತಿಹಾಸ ಕಥನವಿದು.
©2024 Book Brahma Private Limited.