ಹೊಯ್ಸಳೇಶ್ವರ ಕೌಂಡಿನ್ಯ ಅವರ ಕೃತಿಯಾಗಿದೆ. ಸ್ಥಳ ಅಥವಾ ನೃಪಕಾಮನಿಂದ ಸ್ಥಾಪನೆಯಾದ ಹೊಯ್ಸಳ ಸಾಮ್ರಾಜ್ಯ ಮೂರನೆಯ ಬಲ್ಲಾಳನ ಆಳ್ವಿಕೆಯ ನಂತರ, ಹಂತ-ಹಂತವಾಗಿ ಅವನತಿಯತ್ತ ಸಾಗುತ್ತದೆ. ಸಾಮ್ರಾಜ್ಯ, ಸಾಮ್ರಾಟ ಎಷ್ಟೇ ಬಲಯುತನಾಗಿದ್ದರೂ ಶಾಶ್ವತವಾಗಿ ಇರಲು ಸಾಧ್ಯವೇ ಇಲ್ಲ. ಆದರೆ ಈ ಹೊಯ್ಸಳರು ನೀಡಿರುವ ಕೊಡುಗೆಗಳ ಮೂಲಕ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವಾರು ದೇಶಗಳ ಗಮನ ಸೆಳೆದಿದ್ದಾರೆ, ಈ ವಂಶವನ್ನು ಅನೇಕ ರಾಜರುಗಳು ಆಳಿದ್ದರೂ ಸಹ, ವಿಶೇಷ ಕೊಡುಗೆ ನೀಡಿ, ಸಾಮ್ರಾಜ್ಯದ ಬುನಾದಿಯನ್ನು ಭದ್ರಗೊಳಿಸಿದ್ದ ಏಕೈಕ ರಾಜ ವಿಷ್ಣುವರ್ಧನ (ಬಿಟ್ಟಿದೇವ), ರಾಜ್ಯಾಡಳಿತದ ಮಾದರಿಯನ್ನು ವಿವರಿಸುತ್ತಲೇ, ರಾಜನ ಪತ್ನಿಯರಲ್ಲಿ ಪ್ರಾಮುಖ್ಯತೆ ಪಡೆದಿದ್ದ ನಾಟ್ಯರಾಣಿ ಶಾಂತಲ ಆತ್ಮೀಯ ಗೆಳತಿ ಲಕ್ಷ್ಮಿಯ ಭಾವನಾತ್ಮಕ ಸಂಬಂಧ ರೂಪಗೊಳ್ಳುತ್ತದೆ. ಆ ಕಾಲದ ರಾಜಕೀಯದ ಸೂಕ್ಷ್ಮ ಸಂವೇದನೆಗಳೊಂದಿಗೆ, ಮಹಾ ದುರಂತದ ಘಟನೆ ಅನುಕಂಪದ ಸ್ಪಂದನ ಉಂಟು ಮಾಡುತ್ತದೆ. ಆ ದುರಂತದ ಹಿನ್ನಲೆ ಏನು? ಎಲ್ಲವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ ಮಹೋನ್ನತ ಐತಿಹಾಸಿಕ ಕೃತಿಯಾಗಿದೆ.
©2024 Book Brahma Private Limited.