ದುರ್ಗಾವತಿ ಪುಸ್ತಕವನ್ನು ಲೇಖಕ ಕೆ.ಬಿ. ಪ್ರಭುಪ್ರಸಾದ್ ಅವರು ರಚಿಸಿದ್ದಾರೆ. ಚಿಕ್ಕ ಸಂಸ್ಥಾನದ ದೊಡ್ಡ ರಾಣಿ. ಮನೆಗೆ ಬೆಳಕು, ಪ್ರಜೆಗಳಿಗೆ ತಾಯಿ, ರಾಜ್ಯಕ್ಕೆ ರಕ್ಷೆ. ಮೊಗಲ್ ಸೈನ್ಯವನ್ನೆ ದಿಟ್ಟತನದಿಂದ ಎದುರಿಸಿ, ಸ್ವಾತಂತ್ರ್ಯ ಆತ್ಮಗೌರವಗಳಿಗಾಗಿ ಪ್ರಾಣವನ್ನೇ ಅರ್ಪಿಸಿದ ಧೀರೆ ಎಂದು ದುರ್ಗಾವತಿ ಕುರಿತಾಗಿ ಇಲ್ಲಿ ವರ್ಣಿಸಲಾಗಿದೆ. ರಾಣಿ ದುರ್ಗಾವತಿಯ ಬಾಲ್ಯದ ದಿನಗಳು, ಬದುಕಿನ ಏರಿಳಿತಗಳು, ಯುದ್ಧ ಸನ್ನವೇಶಗಳು, ನಡತೆ, ಧೈರ್ಯ, ಪ್ರಜೆಗಳೊಂದಿಗೆ ಹೊಂದಿದ ಅವಿನಾಭಾವ ಸಂಬಂಧ ಹೀಗೆ ಆಕೆಯ ಬದುಕಿನ ವಿವಿಧ ಘಟ್ಟಗಳನ್ನು ಲೇಖಕರು ಈ ಪುಸ್ತಕದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.
©2025 Book Brahma Private Limited.