ಬೀಜಗಣಿತ ಕುರಿತಂತೆ ರಷ್ಯಾದ ಯಾಕೊವ್ ಪೆರೆಲ್ಮನ್ ಅವರ ಕೃತಿಯನ್ನು ಅಡ್ಡೂರು ಕೃಷ್ಣರಾವ್ ಅನುವಾದಿಸಿರುವ ಕೃತಿ-ಮನರಂಜನೆಗಾಗಿ ಬೀಜಗಣಿತ. ಯಾಕೊವ್ ಪೆರೆಲ್ಮನ್ ಅವರ ಬೀಜಗಣಿತವನ್ನು ಏಳು ಕ್ರಿಯೆಗಳ ಅಂಕಗಣಿತವೆಂದು ಪರಿಗಣಿಸಲಾಗಿದೆ. ಕಬ್ಬಿಣದ ಕಡಲೆ ಎಂಬಂತಹ ಬೀಜಗಣಿತವನ್ನು ಸಹ್ಯವಾಗುವಂತೆ ಮನರಂಜನೆಯ ಮೂಲಕ ಪ್ರಸ್ತುತಪಡಿಸಿರುವುದು ಇಲ್ಲಿನ ವಿಶೇಷ.
ವಿವಿಧ ಡಯೊಫಾಂಟೈನ್ ಸಮೀಕರಣಗಳು, ಲಾಗರಿತಂ ಕೋಷ್ಟಕಗಳು, ಖಗೋಳಶಾಸ್ತ್ರದಲ್ಲಿ ಉಪಯೋಗವಾಗುವ ಬೀಜಗಣಿತದ ಘಾತಗಳು ಮಾತ್ರವಲ್ಲದೆ ದೈನಂದಿನ ವ್ಯವಹಾರದಲ್ಲೂ ಎದುರಾಗುವ ಸಮಸ್ಯೆಗಳನ್ನಿಲ್ಲಿ ಸರಳವಾದ ವಿಧಾನದಲ್ಲಿ ಬಿಡಿಸಿಡಲಾಗಿದೆ. ಸಂಕೀರ್ಣ-ಬೃಹತ್ ಗಾತ್ರದ ಸಮಸ್ಯೆಗಳಿಗೆ ಬೀಜಗಣಿತದಲ್ಲಿ ಉತ್ತರವಿದೆಯೆಂದು ಅರಿಯಬಹುದು. ಮೂಲ ಕೃತಿಯು ವಿಶ್ವದ ಹಲವು ಭಾಷೆಗಳಿಗೆ ಅನುವಾದಗೊಂಡಿದೆ.
©2024 Book Brahma Private Limited.