ಖ್ಯಾತ ಆಂಗ್ಲ ಲೇಖಕ ಬ್ರಿಯಾನ್ ಟ್ರೇಸಿ ಅವರ ಯಶಸ್ಸಿನ ಗ್ರಂಥಾಲಯ ಮಾಲಿಕೆಯಡಿ ಪ್ರಕಟಿತ ‘ಪರ್ಸನಲ್ ಸಕ್ಸಸ್’ ಕೃತಿಯನ್ನು ಲೇಖಕ ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದೇ-ವೈಯಕ್ತಿಕ ಯಶಸ್ಸು. ವೈಯಕ್ತಿಕ ಯಶಸ್ಸಿನಲ್ಲಿ ವೈಯಕ್ತಿಕವಾದ ಶಕ್ಯತೆಗಳು ಸಾಮರ್ಥ್ಯಗಳು ಕೊಡುಗೆ ನೀಡಿರುತ್ತವೆ. ತನ್ನ ಸುತ್ತಮುತ್ತಲಿನ ಪ್ರೇರಣೆಗಳು, ಸನ್ನಿವೇಶಗಳು ಸಹ ಯಶಸ್ಸಿಗೆ ಕಾರಣವಾಗುತ್ತವೆ. ಇವನ್ನು ತಳ್ಳಿ ಹಾಕುವಂತಿಲ್ಲ. ಸಾಮೂಹಿಕ ಯಶಸ್ಸಿನಲ್ಲಿ ಎಲ್ಲ ವ್ಯಕ್ತಿಗಳ ಶ್ರಮದ ಕೊಡುಗೆ ಇರುತ್ತದೆ. ಇಲ್ಲಿ ವ್ಯಕ್ತಿಗಳ ಕೊಡುಗೆ ಗೌಣವಾಗಿರುತ್ತದೆ. ವ್ಯಕ್ತಿಗತ ಯಶಸ್ಸು ಎಂದರೆ ಏನು? ಅದರ ಸ್ವರೂಪವೇನು? ಇಂತಹ ಸೂಕ್ಷ್ಮ ಸಂಗತಿಗಳನ್ನು ವಿವರಿಸಿರುವ ಕೃತಿ ಇದು.
©2025 Book Brahma Private Limited.