ಲೇಖಕ ಯಗಟಿ ರಘು ನಾಡಿಗ್ ಅವರು ವ್ಯಾಲೇಸ್ ಡಿ. ವ್ಯಾಟಲ್ಸ್ ಅವರ ‘ದಿ.ಸೈನ್ಸ್ ಆಫ್ ಗೆಟಿಂಗ್ ರಿಚ್’ ಎಂಬ ಆಂಗ್ಲ ಕೃತಿಯನ್ನು ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀಮಂತರಾಗುವುದು ಒಂದು ಕಲೆ ಹಾಗೂ ವಿಜ್ಞಾನವೂ ಹೌದು. ಇಲ್ಲಿಯೂ ನಿಯಮಗಳಿವೆ. ಈ ನಿಯಮಗಳನ್ನು ಮೀರಿದರೆ ಅಥವಾ ಪಾಲಿಸದಿದ್ದರೆ ಶ್ರೀಮಂತಿಕೆಯು ಬಡತನದಲ್ಲಿ ಪರಿವರ್ತನೆಯಾಗುತ್ತದೆ. ರಾತ್ರೋರಾತ್ರಿ ಶ್ರೀಮಂತರಾಗಬೇಕು ಎಂಬ ಹಪಾಹಪಿಯ ಸಲಹೆಗಳು ಇಲ್ಲಿಲ್ಲ. ಇಲ್ಲಿಯ ನಿಯಮಗಳಡಿ ಬಂಡವಾಳ ಹೂಡಿದರೆ ಅದು ಬಡ್ಡಿಸಮೇತ ವಾಪಸ್ಸು ಬರುತ್ತದೆ ಎಂಬ ಎಚ್ಚರಿಕೆಯ ಬರಹಗಳು ಇಲ್ಲಿವೆ.
©2025 Book Brahma Private Limited.