ಖ್ಯಾತ ಲೇಖಕ ಅರವಿಂದ ಗುಪ್ತ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಲೇಖಕ ವಿ.ಎಸ್.ಎಸ್. ಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ಗಣಿತ ಚಟುವತಿಕೆಗಳು. ಪುಸ್ತಕಗಳಲ್ಲಿನ ಅನೇಕ ಗಣಿತದ ಸಮಸ್ಯೆಗಳನ್ನು ಯಾಂತ್ರಿಕವಾಗಿ ಬಿಡಿಸುವುದರಿಂದ, ಮಕ್ಕಳು ಯಾವುದೇ ಪರಿಕಲ್ಪನೆಗಳನ್ನು ಕಲಿಯಲಾರರು. ಮಕ್ಕಳಲ್ಲಿ ಗಣಿತದ ಮಹತ್ವದ ಕಲಿಕೆಯು ಒಗಟು, ಚುಟುಕು ಮತ್ತು ಚಟುವಟಿಕೆಗಳಿಂದಾಗುತ್ತದೆ. ಸಮಸ್ಯಾ ನಿವಾರಣಾ ವಿಧಾನವು ವಸ್ತುಗಳನ್ನು ಅರಿಯುವುದರ ಮೂಲಕ ಗಣಿತ ಕಲಿಕೆಯಲ್ಲಿ ಸಹಕರಿಸುತ್ತದೆ. ಗಣಿತಜ್ಝರ ಜೀವನದ ಉತ್ತೇಜಿತ ಕಥೆಗಳನ್ನು ಅನೇಕ ಸೃಜನಶೀಲ ಚಟುವಟಿಕೆಗಳೊಂದಿಗೆ ಹೊಂದಿಸಿರುವ ಈ ಪುಸ್ತಕವು ಮಕ್ಕಳಿಗೆ ಗಣಿತದ ಮೂರ್ತ ಅನುಭವ ನೀಡುತ್ತದೆ. ಅವರ ಮನೋವಿಕಾಸಕ್ಕೂ, ಕಲ್ಪನಾ ಸಾಮರ್ಥ್ಯ ಹೆಚ್ಚಿಸಲಿಕ್ಕೂ ನೆರವಾಗುತ್ತದೆ.
©2025 Book Brahma Private Limited.