ಖ್ಯಾತ ಇಂಗ್ಲಿಷ್ ಲೇಖಕ ಬ್ರಿಯಾನ್ ಟ್ರೇಸಿ ಅವರ ಯಶಸ್ಸಿನ ಗ್ರಂಥಾಲಯ ಮಾಲಿಕೆಯಡಿ ಪ್ರಕಟಿತ ‘ಮೋಟಿವೇಶನ್’ ಎಂಬ ಕೃತಿಯನ್ನು ಲೇಖಖ ಶಿವಾನಂಧ ಬೇಕಲ್ ಅವರು ‘ಪ್ರೇರಣೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರೇರಣೆಯು ಮನುಷ್ಯನಿಗೆ ಮಾನಸಿಕವಾಗಿ ಚಾಲನಾ ಶಕ್ತಿ ಇದ್ದಂತೆ. ಅದು ವ್ಯಕ್ತಿಯ ಆಸಕ್ತಿ, ಗುರಿ, ಜ್ಞಾನ, ಬೇಕು-ಬೇಡವನ್ನು ಅವಲಂಬಿಸಿರುತ್ತದೆ. ವ್ಯಕ್ತಿಯು ಪ್ರೇರೇಪಿತನಾದರೆ ಆತನು ಬಹುಬೇಗ ಗುರಿಯನ್ನು ತಲುಪುತ್ತಾನೆ. ಕಷ್ಟ-ನಷ್ಟಗಳಿದ್ದರೂ ಅವುಗಳ ಬಗ್ಗೆ ಚಿಂತಿಸಲಾರ. ಆ ಸಂಕಷ್ಟಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು, ತನ್ನ ಅನುಕೂಲಕ್ಕೆ ತಕ್ಕ ಹಾಗು ಪರಿವರ್ತಿಸಿಕೊಂಡು, ಗುರಿ ಸಾಧಿಸುತ್ತಾನೆ. ಆದ್ದರಿಂದ, ವ್ಯಕ್ತಿಗೆ ಪ್ರೇರಣೆ ಮುಖ್ಯ. ಪ್ರೇರಣೆ ಇಲ್ಲದಿದ್ದರೆ ಗುರಿ ಅಥವಾ ಸಾಧಿಸುವುದು ಕಷ್ಟವಾಗುತ್ತದೆ. ಅದನ್ನು ಪಡೆಯುವುದು ಹೇಗೆ? ಇತ್ಯಾದಿ ಸಂಗತಿಗಳ ಕುರಿತು ಸುದೀರ್ಘವಾಗಿ ಚರ್ಚಿಸಿರುವ ಕೃತಿ ಇದು.
©2024 Book Brahma Private Limited.