ಆಹಾ ಎಷ್ಟೊಂದು ಚಟುವಟಿಕೆಗಳು- ಅರವಿಂದ ಗುಪ್ತ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕ ವಿ.ಎಸ್.ಎಸ್. ಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವು ಕಾಗದ ಮಡಚುವುದು, ಆಟಿಕೆಗಳು, ಬೆರಳೊತ್ತುಗಳು, ಪಾಪ್-ಅಪ್ ಚಿತ್ರಗಳು, ಆವರ್ತ ಕೋಷ್ಟಕ, ಅಕ್ಷರ ಚಿತ್ರ, ಪ್ರಯೋಗಗಳು ಮತ್ತು ಸರಳ ವೈಜ್ಞಾನಿಕ ಮಾದರಿಗಳು-ಇವೆಲ್ಲವುಗಳ ನಿಧಿ. ಸರಳ ವಸ್ತುಗಳಿಂದ ಕಲಾತ್ಮಕ ವಸ್ತುಗಳನ್ನು ತಯಾರಿಸುವ ಹಲವು ಬಗೆಗಳ ವಿಜ್ಞಾನದ ಚಟುವಟಿಕೆಗಳ ಭಂಡಾರವನ್ನು ಈ ಪುಸ್ತಕ ತೆರೆದಿಡುತ್ತದೆ. ಮಕ್ಕಳ ಮನೋವಿಕಾಸಕ್ಕೂ, ಅವರ ಕಲ್ಪನಾ ಸಾಮರ್ಥ್ಯ ವಿಸ್ತರಣೆಗೂ ಈ ಕೃತಿಯು ನೆರವಾಗುತ್ತದೆ.
©2024 Book Brahma Private Limited.