ಖ್ಯಾತ ಇಂಗ್ಲಿಷ್ ಲೇಖಕ ಬ್ರಿಯಾನ್ ಟ್ರೇಸಿ ಅವರ ಯಶಸ್ಸಿನ ಗ್ರಂಥಾಲಯ ಮಾಲಿಕೆಯಡಿ ಅವರ ‘ಸೇಲ್ ಸಕ್ಸಸ್’ ಕೃತಿಯನ್ನು ಲೇಖಖ ಶಿವಾನಂದ ಬೇಕಲ್ ಅವರು ‘ಯಶಸ್ವೀ ಮಾರಾಟ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಸ್ತುಗಳನ್ನು ಉತ್ಪಾದಿಸುವುದು ಮುಖ್ಯವಲ್ಲ. ಆ ವಸ್ತುವು ಮಾರುಕಟ್ಟೆಯಲ್ಲಿ ಪ್ರಚಾರ ಪಡೆದು, ಅದರ ಮಾರಾಟದ ಪ್ರಮಾಣ ಹೆಚ್ಚುವುದು ಮುಖ್ಯವಾದದ್ದು. ಹೀಗಾಗಿ, ಮಾರುಕಟ್ಟೆ ವಲಯದಲ್ಲಿ ವಸ್ತುವಿನ ಮಾರಾಟದ ಪ್ರಮಾಣವೇ ಪರಿಗಣಿಸಲ್ಪಡುತ್ತದೆ. ಮತ್ತು ಬಹುತೇಕ ವೇಳೆ, ಅದೇ ಆ ವಸ್ತುವಿನ ಗುಣಮಟ್ಟವನ್ನೂ ನಿರ್ಧರಿಸುತ್ತದೆ ಹಾಗೂ ಗ್ರಾಹಕರನ್ನೂ ಸೆಳೆಯುತ್ತದೆ. ಆದ್ದರಿಂದ, ಯಾವುದೇ ಕಂಪೆನಿ ಎಂತಹ ವಸ್ತುಗಳನ್ನು ಉತ್ಪಾದಿಸುತ್ತದೆ ಎನ್ನುವುದಕ್ಕಿಂತ ಅದರ ಮಾರಾಟದ ಕೌಶಲಗಳು ಹೇಗಿವೆ ಎಂಬುದು ಅಧ್ಯಯನ ಮಾಡಬೇಕು. ಮಾರುಕಟ್ಟೆ ವಲಯದ ಇಂತಹ ಸಂಶೋಧನಾರ್ಹ ಸಂಗತಿಗಳನ್ನು ಒಳಗೊಂಡ ಉಪಯುಕ್ತ ಪುಸ್ತಕವಿದು.
©2024 Book Brahma Private Limited.