ಬ್ರಿಯಾನ್ ಟ್ರೇಸಿ ಅವರ ಯಶಸ್ಸಿನ ಗ್ರಂಥಾಲಯ ಮಾಲಿಕೆಯಡಿ ಅವರ ‘ಮ್ಯಾನೇಜ್ ಮೆಂಟ್ ’ ಎಂಬ ಕೃತಿಯನ್ನು ಲೇಖಕ ಶಿವಾನಂದ ಬೇಕಲ್ ಅವರು ‘ವ್ಯವಸ್ಥಾಪನೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಯಾವುದೇ ಒಂದು ಕೆಲಸದ ಇಲ್ಲವೇ ಸಂಸ್ಥೆಯ ಇಲ್ಲವೇ ಸಂಘಟನೆಯ ಚಾಲನಾ ಶಕ್ತಿಗೆ ವ್ಯವಸ್ಥಾಪನೆ ಎಂದು ಕರೆಯಬಹುದು. ಇದು ಸಹ ಒಂದು ಕಲೆ. ಎಲ್ಲರಿಗೂ ಯಾವುದೇ ಒಂದು ವ್ಯವಸ್ಥೆಯನ್ನು ನಿರ್ವಹಿಸಲು ಬರುವುದಿಲ್ಲ. ಇದು ಬುದ್ದಿ ಕೌಶಲವೂ ಹೌದು. ವಿವಿಧ ರೀತಿಯ ವ್ಯವಸ್ಥಾಪನೆಗಳಿರುತ್ತವೆ. ಅವುಗಳ ವ್ಯವಸ್ಥೆಗೆ ಧಕ್ಕೆಯಾಗದ ಹಾಗೆ ಕಾರ್ಮಿಕರನ್ನೂ ಸಹ ಅಸಮಾಧಾನಗೊಳಿಸದೇ ಸಮತೂಕದಲ್ಲಿ ಕೆಲಸ ಆಗುವ ಹಾಗೇ ನೋಡಿಕೊಳ್ಳಬೇಕು. ಇಂತಹ ಕಲೆಯ ಕುರಿತು ಹಲವು ಸೂತ್ರಗಳನ್ನು ಹಾಗೂ ಉತ್ತಮ ವ್ಯವಸ್ಥಾಪಕರು ಆಗುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿರುವ ಕೃತಿ ಇದು.
©2025 Book Brahma Private Limited.