ಡಾ. ವಿನೋದ ಛಬ್ಬಿ ಅವರು ಮನೋಚಿಕಿತ್ಸಕರು. ಧಾರವಾಡದಲ್ಲಿ ವಾಸ. ಪ್ರಜಾವಾಣಿ ಸಂಸ್ಥೆಯ ಸುಧಾ ವಾರಪತ್ರಿಕೆಯಲ್ಲಿ ಸುಖೀಭವ ಎಂಬ ಆಂಕಣದಲ್ಲಿ ಲೈಂಗಿಕ ಸಮಸ್ಯೆ, ಲೈಂಗಿಕತೆಯ ತಪ್ಪುಗ್ರಹಿಕೆಗಳು, ದಾಂಪತ್ಯ, ವಿರಸ, ಹೊಂದಾಣಿಕೆಯ ಮಹತ್ವ ಇತ್ಯಾದಿ ಕುರಿತು ಬರೆಯುತ್ತಿದ್ದರು. ಸುಖೀ ದಾಂಪತ್ಯ ಕುರಿತ ಮತ್ತೊಂದು ಅಂಕಣದಡಿ ಹೆಣ್ಣಿನ ಕಾಮಪ್ರಜ್ಞೆ ಜಾಗೃತಿ ಯಾವಾಗ ಎಂಬ ಶೀರ್ಷಿಕೆಯಡಿ ಹಲವು ಸರಣಿಗಳನ್ನೇ ಬರೆದು ಜನಮೆಚ್ಚುಗೆ ಪಡೆದಿದ್ದರು. ಲೈಂಗಿಕ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಾಸ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದು ಮನೋವೈದ್ಯಕೀಯ ವಲಯದಲ್ಲಿ ಅವರ ಹೆಸರು ಚಿರಪರಿಚಿತವಾಗಿದೆ.