ರಾಜಾದಿತ್ಯ ವಿರೂಪಾಕ್ಷಪ್ಪ ಕೋರಗಲ್ ಅವರ ಕೃತಿಯಾಗಿದೆ. ಕನ್ನಡದ ಮೊದಲ ಗಣಿತಜ್ಞ ರಾಮಾಧಿಸ್ಯ ಗೋವಾಕದಂಬರ ಆಶ್ರಯದಲ್ಲಿದ್ದು ತನ್ನ ಏಳು ಗಣಿತ ಕೃತಿಗಳನ್ನು ರಚಿಸಿದ್ದಾನೆ. ಆ ಗಣಿತಜ್ಞನ ಕಾಲದಲ್ಲಿ ಶಿರ್ಶಿ ತಾಲೂಕಿನ ಸ್ವಾದಿ ಜೈನಮಠ ಅಸ್ತಿತ್ವದಲ್ಲಿದ್ದು ಆಗ ಇದು ರಾಜಾದಿತ್ಯ ಆಶ್ರಯ ಪಡೆದಿದ್ದ, ಗೋವೆಯ ಕದಂಬರ ರಾಜ್ಯಕ್ಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ. ಆದ್ದರಿಂದ ಸ್ವಾದಿಯ ಜೈನಮಠಕ್ಕೂ ಮತ್ತು ರಾಜಾದಿತ್ಯನಿಗೂ ಒಂದು ರೀತಿಯ ಕರುಳ ಬಳ್ಳಿಯ ಸಂಬಂಧವಿದೆ. ಸಾವಿರ ವರ್ಷದ ಹಿಂದಿನ ಈ ಸಂಬಂಧ ಈಗಿನ ಸ್ವಾದಿಯ ಸ್ವಸ್ವತೀ ಭಟ್ಟಾಕಳಂಕ ಮಹಾಸ್ವಾಮಿಗಳ ಅಂತರಾತ್ಮದ ಬಂದಿರಬೇಕು ಎಂದೆನಿಸುತ್ತದೆ. ಅಂತೆಯೇ ಈ ಸಂಶೋಧನ ಗ್ರಂಥವನ್ನು ತಾವೇ ಶ್ರೀ ಮಠದಿಂದ ಪ್ರಕಟಪಡಿಸುತ್ತೇವೆ ಎಂದು ಹೇಳುವ ಸಾವಿರ ವರ್ಷಗಳಿಂದ ಮೂಲೆಗುಂಪಾಗಿದ್ದ ಶಾಸ ಸಾಹಿತ್ಯಕ್ಕೆ ಮತ್ತೆ ಜೀವ ತುಂಬಿದ್ದಾರೆ. 'ಜಿನ ತಾ ಸಂಪತ್ತೆನಿವ ರಾಜಾದಿತ್ಯ' ಎಂದು ಹಾಡಿದೆ ಕವಿವರ್ಯನಿಗೆ ವಿಶೇಷ ಗೌರವವನ್ನು ತಂದು ಕೊಟ್ಟಿದ್ದಾರೆ. ಇಂಥಹ ರಚನಾತ್ಮಕ ಕಾರ್ಯಗಳಿಗೆ ಮಹತ್ವ ಕೊಡುವ ಮೂಲಕ ತಾವು ಶಿಷ್ಟೇಷ್ಟ ಶಾಸ್ತ್ರಾಧ್ಯಯನಶೀಲರೂ ಮತ್ತು ಅಂಥ ಶಾಸ್ತ್ರ ಪ್ರಸಾರದಲ್ಲಿ ನಿರತರೂ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಧರ್ಮನಿಷ್ಠೆ, ತಪಃಪಭಾವ, ಶಾಸ್ತ್ರಾಧ್ಯಯನ, ಶ್ರಾವಕ ಶ್ರಾವಕೀಯರಿಗೆ ಸದ್ದೋಧೆಗಳಿಂದಾಗಿ ಸಾಕಷ್ಟು ಜನ ಮನ್ನಣೆ ಗಳಿಸಿದವರಾಗಿದ್ದಾರೆ. ಈ ಸಂಸ್ಥಾನದ ಜವಾಬ್ದಾರಿ ವಹಿಸಿಕೊಂಡು ಕೇವಲ ಮೂರು ವರ್ಷದಲ್ಲಿ ಅಭೂತಪೂರ್ವ ಸುಧಾರಣೆಯನ್ನು ಅವರು ಶ್ರೀ ಮಠಕ್ಕೆ ತಂದಿದ್ದಾರೆ. ಹಿಂದಿ, ಇಂಗ್ಲೀಷ, ಸಂಸ್ಕೃತ, ತಮಿಳು, ಪ್ರಾಕೃತ, ಕನ್ನಡ ಬಹುಭಾಷಾ ಪಂಡಿತೋತ್ತಮರೂ, ಅತ್ಯಂತಕ್ರಿಯಾಶೀಲರೂ, ಶ್ರಾವಕ ಶ್ರಾವಕಿಯರನ್ನು ತಮ್ಮ ತಪಃತೇಜದಿಂದ ಆಕರ್ಷಿಸುವವರು, ಜಿನತತ್ವಾಂಬರ ಭೂಷಿತರೂ, ಆದ ಮಹಾಸ್ವಾಮಿಗಳು ಹಾವೇರಿಯ ಪಂಡಿತೋತ್ತಮ ಶ್ರೀ ಶಂಭವ ನಂದಿ ಮುನಿಮಹಾರಾಜರ ಪೂರ್ವಾಶ್ರಮದ ವಂಶಸ್ತರೆಂಬುದು ನಾವೆಲ್ಲ ಅಭಿಮಾನ ಪಡಬೇಕಾದ ಸಂಗತಿ ಎಂದು ವಿರೂಪಾಕ್ಷಪ್ಪ ಕೋರಗಲ್ ಪುಸ್ತಕದ ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.