ಮುತ್ತಿನ ಚಿಪ್ಪಿನ ಹಾರ' ಕನ್ನಡಕ್ಕೆ ಬಹಳ ವಿಶಿಷ್ಟವಾದ ಕೃತಿ. ಗೋವೆಯ ಕದಂಬರ ಆಸ್ಥಾನದ ಕವಿಯಾಗಿದ್ದನೆಂದು ನಂಬಲಾದ ರಾಜಾದಿತ್ಯನು ರಚಿಸಿರುವ ಈ ಕೃತಿಯು ರತ್ನಗಳ ವಿಚಾರದಲ್ಲಿನ ಶಾಸ್ತ್ರೀಯ ವಿಚಾರಗಳನ್ನು ಒಳಗೊಂಡಂತಹ ಕೃತಿ, ಇಂದು ಮರೆಯಾಗುತ್ತಿರುವ ವಿದ್ಯೆಯೊಂದನ್ನು ಕುರಿತ ಈ ಕೃತಿಗೆ ಚಾರಿತ್ರಿಕ ಮತ್ತು ಶಾಸ್ತ್ರೀಯ ಮಹತ್ವ ಎರಡೂ ಇದೆ. ಮುತ್ತು, ಹವಳ, ವಜ್ರಗಳ ಕುರಿತ ಬೇರೆ ಬೇರೆ ಪ್ರಕಾರಗಳನ್ನು ಅವುಗಳ ಶ್ರೇಷ್ಠತೆಯನ್ನು ತಿಳಿಸುವ ಕ್ರಮವನ್ನು ಬಿಂಬಿಸಿರುವ ಕೃಷಿ ಕಾವ್ಯಾತ್ಮಕ ರೀತಿಯಲ್ಲಿರುವುದು ಇನ್ನೊಂದು ಮಹತ್ವದ ಸಂಗತಿ, ಬಹುಕಾಲ ಅಲಭ್ಯವಾಗಿದ್ದ ಕೃತಿಯನ್ನು ಪರಿಶೋಧಿಸಿ ನೀಡಿರುವ ವಿರೂಪಾಕ್ಷಪ್ಪ ಕೋರಗಲ್ ಅವರ ಶ್ರಮ ನಿಜಕ್ಕೂ ಸಾರ್ಥಕ. ಸೂತ್ರರೂಪದಲ್ಲಿರುವ ಈ ಕೃತಿಯು ಸಾಕಷ್ಟು ಮಹತ್ವದ ಅಧ್ಯಯನಕ್ಕೆ ವಸ್ತುವಾಗಬಲ್ಲದಾಗಿದೆ. ಇಂತಹ ವಿಶಿಷ್ಟವಾದ ಕೃತಿ ಹಾವೇರಿಯಲ್ಲಿ ನಡೆಯುತ್ತಿರುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮುದ್ರಣ ಗೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ನಾಡೋಜ ಮಹೇಶ ಜೋಶಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.