ಲೇಖಕ ಸ್ವಾಮಿ ನಾರಾಯಣ ತೀರ್ಥ ಅವರು ಆಯುರ್ವೇದ ಪದ್ಧತಿಯಲ್ಲಿ ಆಳವಾದ ನಂಬಿಕೆಯುಳ್ಳವರು. ಗಿಡ-ಜಡಿಬೂಟಿಗಳ ಮಹತ್ವ, ಆರೋಗ್ಯ ಕಾಯ್ದುಕೊಳ್ಳುವಲ್ಲಿ ಅವುಗಳ ಪಾತ್ರ, ಭಾರತೀಯ ಆಯುರ್ವೇದ ಪರಂಪರಾಗತ ಜ್ಞಾನ ಇತ್ಯಾದಿ ಅಂಶಗಳು ಅವರ ವಿಶೇಷಾಧ್ಯಯನದ ಕ್ಷೇತ್ರಗಳು. ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನ ಮಾಲಿಕೆಯಡಿ ಈ ಕೃತಿ ಪ್ರಕಟಿಸಲಾಗಿದೆ. ಪ್ರಕೃತಿ ಸಂಜೀವಿನಿ ಎಂಬುದು ಸ್ವಾಮಿ ನಾರಾಯಣ ತೀರ್ಥರು ರಚಿಸಿದ ಕೃತಿ. ಪಪ್ಪಾಯಿ, ನಿಂಬೆಹಣ್ಣು, ಅರಿಶಿಣ, ಬೇವು, ಬೆಳ್ಳುಳ್ಳಿ, ತುಳಸಿ, ಜೇನುತುಪ್ಪ, ಈರುಳ್ಳಿ, ನೆಲ್ಲಿಕಾಯಿ, ದಾಳಿಂಬೆ, ಶುಂಠಿ, ಇಂಗು.... ಹೀಗೆ ಆಯುರ್ವೇದ ವೈದ್ಯಪದ್ಧತಿಯ ಚಿಕಿತ್ಸಾ ಗುಣಗಳಿರುವ ಹಣ್ಣು, ಕಾಯಿ, ಸೊಪ್ಪು, ಗಿಡ ಮುಂತಾದವುಗಳ ಮಹತ್ವವನ್ನು ವಿಸ್ತೃತವಾಗಿ ವಿವರಿಸಿರುವ ಕೃತಿ ಇದು. ಔಷಧಿಯ ಗುಣಗಳು, ಜೀವಸತ್ವಗಳು, ಉಪಯೋಗಗಳು, ಆರೋಗ್ಯವರ್ಧಕ ಅಂಶಗಳು ಹಾಗೂ ಸಾಮಾನ್ಯ ರೋಗಗಳಿಗೆ ಉಪಚಾರ ಹೀಗೆ ವಿಸ್ತೃತ ಅಧ್ಯಾಯಗಳಡಿ ಇಡೀ ಪ್ರಕೃತಿಯಲ್ಲಿರುವ ಸಂಜೀವಿನಿಗಳೆಂದೇ ಲೇಖಕರು ಸಂಬೋಧಿಸಿ, ಈ ಕೃತಿಯಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ.
©2024 Book Brahma Private Limited.