`ಭೌತವಿಜ್ಞಾನ ನೂರೆಂಟು ಪ್ರಶ್ನೆಗಳು' ಕೃತಿಯು ಪ್ರೊ.ಡಿ.ಆರ್. ಬಳೂರಗಿ ಅವರ ಗದ್ಯಬರಹವಾಗಿದೆ. ಇಲ್ಲಿ ಭೌತವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಜಟಿಲ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಈ ಪುಸ್ತಕ ಸಹಕಾರಿಯಾಗಿದೆ. ಚಿತ್ರಸಹಿತವಾದ ವಿವರಣೆಯೊಂದಿಗೆ ಭೌತ ನಿಯಮಗಳಿಗನುಸಾರವಾಗಿ ನಡೆಯುವ ವಿದ್ಯಮಾನಗಳು ನಮಗೆ ಹೆಚ್ಚಿನ ನೀಡುತ್ತವೆ. ಭೌತವಿಜ್ಞಾನದಲ್ಲಿನ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿವೆ ಹಾಗೂ ಸಮಂಜಸ ಉತ್ತರಗಳೂ ಇವೆ. ಯಾವುದೇ ಸಂದರ್ಭದಲ್ಲೂ ಎಷ್ಟೇ ಅನ್ವೇಷಣೆಗಳಾದರೂ ಮೂಲ ಭೌತಿಕ ನಿಯಮಗಳು ಬದಲಾಗುವುದಿಲ್ಲವೆಂಬ ಸತ್ಯ ಗೋಚರವಾಗುವುದು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.
ಕೃತಿಯಲ್ಲಿ ಬಲ ಮತ್ತು ಚಲನೆ, ಕೆಲಸ, ಶಕ್ತಿ ಮತ್ತು ಸಾಮರ್ಥ್ಯ, ದ್ರವಗಳು, ಅನಿಲಗಳು, ಉಷ್ಣ ಮತ್ತು ಉಷ್ಣತೆ, ಬೆಳಕು, ವಿದ್ಯುತ್ತು ಅಧ್ಯಾಯಗಳನ್ನು ಕಾಣಬಹುದು.
©2024 Book Brahma Private Limited.