ಮಹಾವಂಚನೆ

Author : ಬಿ. ಶ್ರೀಪಾದಭಟ್

Pages 108

₹ 90.00




Year of Publication: 2023
Published by: ದಲಿತ ಸಂಘರ್ಷ ಸಮಿತಿ
Address: ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ, ಲೇಟ್ ನಾರಾಯಣಪ್ಪ ಬಿಲ್ಡಿಂಗ್, ಕೊರಚರಪೇಟೆ, ಹಳೆ ಬಸ್ ನಿಲ್ದಾಣದ ಹತ್ತಿರ, ಚಿಕ್ಕಬಳ್ಳಾಪುರ\n
Phone: 9449073119

Synopsys

ಮಹಾವಂಚನೆ ಮಾವಳ್ಳಿ ಶಂಕರ್‌ , ಬಿ ಶ್ರೀಪಾದ ಭಟ್‌, ವಿಕಾಸ್‌ .ಆರ್‌ ಮೌರ್‍ಯ ಅವರ ಸಂಪಾದಿತ ಕೃತಿಯಾಗಿದೆ. ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಜಾರಿಗೊಳಿಸುವವರು ದುಷ್ಟರಾಗಿದ್ದರೆ ಆ ಸಂವಿಧಾನ ಕೆಟ್ಟದಾಗಿರುತ್ತದೆ. ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಜಾರಿಗೊಳಿಸುವವರು ನ್ಯಾಯವಂತರಾಗಿದ್ದರೆ ಆ ಸಂವಿಧಾನ ಉತ್ತಮವಾಗಿರುತ್ತದೆ. ಮುಂದಿನ ದಿನಗಳಲ್ಲಿ ಭಾರತೀಯರು ಮತ್ತು ಅವರ ಪಕ್ಷಗಳು ಹೇಗೆ ವರ್ತಿಸುತ್ತಾರೆ ಎಂದು ಹೇಗೆ ಹೇಳುವುದು? ಅವರು ತಮ್ಮ ಉದ್ದೇಶಗಳನ್ನು ಸಾಧಿಸಲು ಸಂವಿಧಾನಿಕ ವಿಧಿಗಳನ್ನು ಅನುಸರಿಸುವರೇ? ಎಂಬುದನ್ನು ಮಹಾವಂಚನೆ ಕೃತಿಯ ಬೆನ್ನುಡಿಯಲ್ಲಿ ತಿಳಿಸಲಾಗಿದೆ.

About the Author

ಬಿ. ಶ್ರೀಪಾದಭಟ್

ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರು. ವೃತ್ತಿಯಿಂದ ಇಂಜಿನಿಯರ್. ವಿದ್ಯಾರ್ಥಿ ದೆಸೆಯಲ್ಲಿ ಎಂಬತ್ತರ ದಶಕದಲ್ಲಿ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗದ ಸಂದರ್ಭದಲ್ಲಿ ಎಸ್ ಎಫ್ ಐ ಮತ್ತು ದಲಿತ ಸಂಘರ್ಷ ಸಮಿತಿಯ ಜೊತೆಗೂಡಿ ಪ್ರಗತಿಪರ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಆಗ ನಡೆದ ವಿಜಯ ನಗರ ಉಕ್ಕು ಕಾರ್ಖಾನೆ ( ಈಗ ಜಿಂದಾಲ್)ಯ ಬೇಡಿಕೆಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿವಿದ ಪ್ರಗತಿಪರ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ತುಂಗಾ ಉಳಿಸಿ ಹೋರಾಟ, ಜಪಾನ್ ಟೌನ್ ಶಿಪ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ಪರ್ಯಾಯ ...

READ MORE

Related Books